ತರಕಾರಿಗಳಲ್ಲಿ ಅದರಲ್ಲೂ ವಿಶೇಷವಾಗಿ ಸೊಪ್ಪುಗಳಲ್ಲಿ ಆಂಟಿ ಆಕ್ಸಿಡೆಂಟ್ ಗಳು ಹೇರಳವಾಗಿರುತ್ತವೆ. ಚಳಿಗಾಲದಲ್ಲಿ ಇವುಗಳನ್ನು ಜಾಣ್ಮೆಯಿಂದ ಸೇವನೆ ಮಾಡುವುದರಿಂದ ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಬಹುದು.
ಸೊಪ್ಪು ಖರೀದಿಸುವಾಗ ತಾಜಾ ಆಗಿರುವುದನ್ನೇ ಆಯ್ಕೆ ಮಾಡಿ. ಸಾವಯವ ಸೊಪ್ಪನ್ನು ಆಯ್ಕೆ ಮಾಡಿ. ಅವುಗಳನ್ನು ಬೇಯಿಸುವ ಮೊದಲು ಸ್ವಚ್ಛವಾಗಿ ತೊಳೆದುಕೊಳ್ಳಲು ಮರೆಯದಿರಿ. ತೊಳೆದ ಬಳಿಕ ಸೊಪ್ಪನ್ನು ಸಂಪೂರ್ಣವಾಗಿ ಒಣಗಲು ಬಿಡಿ.
ಸೊಪ್ಪುಗಳಿಂದ ಪಲ್ಯ ಸಾಂಬಾರು ತಯಾರಿಸಿ ಬಡಿಸಿದಾಗ ಮಕ್ಕಳು ಇಷ್ಟಪಡದೆ ಹೋಗಬಹುದು. ಹಾಗಾಗಿ ಮಕ್ಕಳಿಗೆ ಇಷ್ಟವಾಗುವಂತೆ ಸಬ್ಜಿ, ಪಾಲಕ್ ಪನೀರ್, ಪಕೋಡಾದಂಥ ಸ್ನಾಕ್ಸ್, ಅಥವಾ ಪಾಸ್ತಾ ತಯಾರಿಸಲು ಬಳಸಿ.
ಸೊಪ್ಪನ್ನು ಚಿಕ್ಕದಾಗಿ ಹೆಚ್ಚಿ. ದಾಲ್ ಜೊತೆ ಬೆರೆಸಿದರೆ ರುಚಿಯೂ ಉತ್ತಮವಾಗಿರುತ್ತದೆ. ಮನೆ ಮಂದಿಯೆಲ್ಲಾ ಇಷ್ಟಪಟ್ಟು ಸವಿಯುವುದು ನಿಶ್ಚಿತ. ಪರೋಟಾಗಳಲ್ಲಿ ಸ್ಟಫ್ ಆಗಿಯೂ ಇದನ್ನು ಬಳಸಬಹುದು.