ಕೊರೊನಾ ಲಸಿಕೆಯ ಎರಡನೇ ಹಂತದ ಅಭಿಯಾನ ನಡೆಯುತ್ತಿದೆ. ಆರಂಭದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಕೊರೊನಾ ಲಸಿಕೆ ನೀಡಲಾಗಿತ್ತು. ಎರಡನೇ ಹಂತದಲ್ಲಿ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಹಾಗೂ 45 ವರ್ಷ ಮೇಲ್ಪಟ್ಟ, ಗಂಭೀರ ಖಾಯಿಲೆಯಿಂದ ಬಳಲುತ್ತಿರುವವರಿಗೆ ಕೊರೊನಾ ಲಸಿಕೆ ಹಾಕಲಾಗ್ತಿದೆ. ಏಪ್ರಿಲ್ 1ರ ನಂತ್ರ 45 ವರ್ಷ ಮೇಲ್ಪಟ್ಟ ಎಲ್ಲರೂ ಕೊರೊನಾ ಲಸಿಕೆ ಪಡೆಯಬಹುದಾಗಿದೆ.
ಕೊರೊನಾ ಲಸಿಕೆ ಪಡೆಯುವ ಮೊದಲು ಅನೇಕ ಪ್ರಶ್ನೆಗಳು ಏಳುವುದು ಸಹಜ. ಕೊರೊನಾ ಲಸಿಕೆ ಹಾಕಿಸಿಕೊಳ್ಳುವ ಮೊದಲು ಹಾಗೂ ನಂತ್ರ ಬೇರೆ ಖಾಯಿಲೆಯ ಮಾತ್ರೆಗಳನ್ನು ಸೇವಿಸಬೇಕಾ? ಬೇಡ್ವಾ? ಎಂಬ ಪ್ರಶ್ನೆ ಕಾಡುತ್ತದೆ. ಕೊರೊನಾ ಲಸಿಕೆ, ಕೊರೊನಾ ವಿರುದ್ಧ ಹೋರಾಡಲು ರೋಗನಿರೋಧಕ ಶಕ್ತಿ ದೇಹಕ್ಕೆ ನೀಡುತ್ತದೆ. ಇದು ಸಂಪೂರ್ಣ ಸುರಕ್ಷಿತವಾಗಿದೆ. ಬಿಪಿ ಮತ್ತು ಸಕ್ಕರೆ ಖಾಯಿಲೆಯಿಂದ ಬಳಲುತ್ತಿರುವ ರೋಗಿಗಳಿಗೆ ಈ ಲಸಿಕೆ ಪಡೆಯುವುದು ಮುಖ್ಯ. ಆದರೆ ಲಸಿಕೆ ತೆಗೆದುಕೊಳ್ಳುವಾಗ ಸಕ್ಕರೆ ಮತ್ತು ಬಿಪಿ ಎರಡೂ ನಿಯಂತ್ರಣದಲ್ಲಿರಬೇಕು. ಲಸಿಕೆ ಹಾಕಿದ ನಂತರ ನಿಮ್ಮ ದೈನಂದಿನ ಔಷಧಿ, ಮಾತ್ರೆ ಸೇವನೆ ಮುಂದುವರಿಸಬಹುದು.
ಥೈರಾಯ್ಡ್ ತೂಕ ಹೆಚ್ಚಾಗುವುದರೊಂದಿಗೆ ಚಯಾಪಚಯ ಮತ್ತು ಹಾರ್ಮೋನುಗಳ ಅಸಮತೋಲನಕ್ಕೆ ಕಾರಣವಾಗುತ್ತದೆ. ಇದು ರೋಗ ನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುತ್ತದೆ. ಆದ್ದರಿಂದ ಥೈರಾಯ್ಡ್ ರೋಗಿಗಳಲ್ಲಿ ಕೊರೊನಾ ಸೋಂಕಿನ ಅಪಾಯ ಹೆಚ್ಚು. ಥೈರಾಯ್ಡ್ ರೋಗಿಗಳು ಕೋವಿಡ್ ಲಸಿಕೆ ತೆಗೆದುಕೊಳ್ಳುವುದು ಅಗತ್ಯ. ಲಸಿಕೆ ತೆಗೆದುಕೊಳ್ಳುವ ಮೊದಲು ಮತ್ತು ನಂತರ ಔಷಧಿಗಳನ್ನು ಮುಂದುವರಿಸಬಹುದು. ಆದರೆ ಇದಕ್ಕೂ ಮೊದಲು ವೈದ್ಯರನ್ನು ಸಂಪರ್ಕಿಸುವುದು ಉತ್ತಮ.
ನುಗ್ಗೆಸೊಪ್ಪು ಪಲ್ಯ ಸವಿದಿದ್ದೀರಾ….?
ಅಲರ್ಜಿಯಿಂದ ಬಳಲುತ್ತಿರುವವರು, ಮಾತ್ರೆ ಸೇವನೆ ಮಾಡುತ್ತಿರುವವರು ಭಯಪಡುವ ಅಗತ್ಯವಿಲ್ಲ. ಅಸ್ತಮಾ, ರಿನಿಟಿಸ್ ಅಲರ್ಜಿ ಮತ್ತು ಅಲರ್ಜಿಕ್ ಡರ್ಮಟೈಟಿಸ್‌ನಂತಹ ಸಾಮಾನ್ಯ ಅಲರ್ಜಿಯಿಂದ ಬಳಲುತ್ತಿರುವವರಿಗೆ ಲಸಿಕೆ ಸುರಕ್ಷಿತವಾಗಿದೆ ಎಂದು ವೈದ್ಯರು ಹೇಳಿದ್ದಾರೆ.
ಹೃದಯ ಕಾಯಿಲೆಗಳು ಅಥವಾ ಪಿತ್ತಜನಕಾಂಗದ ಕಾಯಿಲೆಯಿಂದ ಬಳಲುತ್ತಿರುವ ಅಥವಾ ಈ ಹಿಂದೆ ಹೃದಯಾಘಾತ ಅಥವಾ ಪಿತ್ತಜನಕಾಂಗದ ತೊಂದರೆಗೆ ತುತ್ತಾದ ಜನರು ಕೋವಿಡ್ ಲಸಿಕೆಯನ್ನು ಔಷಧಿಗಳೊಂದಿಗೆ ತೆಗೆದುಕೊಳ್ಳಬಹುದು. ತಮ್ಮ ಔಷಧಿಗಳನ್ನು ಸೇವಿಸಿದ ನಂತರ ಕೋವಿಡ್ ಲಸಿಕೆ ತೆಗೆದುಕೊಳ್ಳುವುದು ಸುರಕ್ಷಿತವಾಗಿದೆ. ರೋಗನಿರೋಧಕ ಶಕ್ತಿಯನ್ನು ಬಲಪಡಿಸುವ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದರೆ, ಕೋವಿಡ್ ಲಸಿಕೆ ಅಂತಹವರಿಗೆ ಪ್ರಯೋಜನಕಾರಿ.
ಕ್ಯಾನ್ಸರ್ ನಿಂದ ಬಳಲುತ್ತಿರುವ ಜನರಿಗೆ ಹೆಚ್ಚಿನ ಪ್ರಮಾಣದಲ್ಲಿ ರೋಗನಿರೋಧಕ ಔಷಧಿ ನೀಡಲಾಗುತ್ತದೆ. ಕ್ಯಾನ್ಸರ್ ರೋಗಿಗಳಿಗೆ ಬೇಗ ಕೊರೊನಾ ಲಸಿಕೆ ನೀಡಬೇಕು. ಐಎಂಎಂ ಮಾರ್ಗಸೂಚಿಗಳ ಪ್ರಕಾರ ವ್ಯಾಕ್ಸಿನೇಷನ್ ಮೊದಲು ಕೀಮೋಥೆರಪಿ ಬಗ್ಗೆ ಯೋಚಿಸಬೇಕು.
ಕೀಮೋಥೆರಪಿಯಾಗಿ 4 ವಾರಗಳ ನಂತರ ಕೊರೊನಾ ಲಸಿಕೆ ಪಡೆಯಬೇಕು. ಇತ್ತೀಚೆಗೆ ಶಸ್ತ್ರಚಿಕಿತ್ಸೆಗೆ ಒಳಗಾದವರು ತಕ್ಷಣ ಲಸಿಕೆ ತೆಗೆದುಕೊಳ್ಳುವ ಅಗತ್ಯವಿಲ್ಲ.
ನಿದ್ರಾಹೀನತೆ ಮತ್ತು ಮಾನಸಿಕ ಅಸ್ವಸ್ಥತೆಗಳು ರೋಗ ನಿರೋಧಕ ಶಕ್ತಿಯನ್ನು ಕಡಿಮೆ ಮಾಡುತ್ತದೆ. ಒತ್ತಡ ಅಥವಾ ಖಿನ್ನತೆಯಿಂದ ಬಳಲುತ್ತಿರುವ ರೋಗಿಗಳು ತೆಗೆದುಕೊಳ್ಳುವ ಔಷಧಿಗಳು ದೇಹದಲ್ಲಿ ಉರಿಯೂತದ ಸ್ಥಿತಿಗೆ ಕಾರಣವಾಗಬಹುದು. ಅಂತಹ ಜನರು ಲಸಿಕೆ ತೆಗೆದುಕೊಳ್ಳುವ ಮೊದಲು ಒಮ್ಮೆ ವೈದ್ಯರನ್ನು ಸಂಪರ್ಕಿಸಬೇಕು.
ವರದಿಯ ಪ್ರಕಾರ, ಲಸಿಕೆ ಮೊದಲು ಕೆಲ ಔಷಧಿಗಳನ್ನು ತೆಗೆದುಕೊಳ್ಳಬಾರದು. ಕ್ಯಾನ್ಸರ್, ಥೈರಾಯ್ಡ್ ಮತ್ತು ಎಚ್ಐವಿಗೆ ಔಷಧಗಳು ಮತ್ತು ಚುಚ್ಚುಮದ್ದನ್ನು ತೆಗೆದುಕೊಳ್ಳಬಾರದು. ಲಸಿಕೆ ನಂತರ ಇದನ್ನು ಸೇವಿಸಬಹುದು. ಖಾಯಿಲೆಯಿಂದ ಬಳಲುವ ಜನರು ಲಸಿಕೆಗೂ ಮುನ್ನ ವೈದ್ಯರನ್ನು ಭೇಟಿ ಮಾಡುವುದು ಒಳ್ಳೆಯದು.