ಮುತ್ತು ಪ್ರೀತಿಯನ್ನು ವ್ಯಕ್ತಪಡಿಸುವ ಒಂದು ವಿಧಾನ. ಮುತ್ತಿಕ್ಕುವುದರಿಂದ ಸಂಬಂಧ ಗಟ್ಟಿಯಾಗುತ್ತದೆ. ಪ್ರೀತಿ ಹೆಚ್ಚಿಸುವ ಮುತ್ತು ಕೆಲವು ಬಾರಿ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದುಂಟು.
ಮುತ್ತಿಕ್ಕುವುದರಿಂದ ಬಾಯಿಯ ಜೊಲ್ಲು ಒಬ್ಬ ವ್ಯಕ್ತಿಯಿಂದ ಇನ್ನೊಬ್ಬ ವ್ಯಕ್ತಿಯನ್ನು ತಲುಪುತ್ತದೆ. ಇದು ಮುತ್ತಿನ ರೋಗಕ್ಕೆ ಕಾರಣವಾಗಬಹುದು. ಮುತ್ತು ಎಪ್ಸ್ಟೀನ್ ಎಂಬ ವೈರಸ್ ಹರಡುತ್ತದೆ. ಎಂಜಲು ಸೇವನೆ ಮಾಡುವುದರಿಂದ ವೈರಸ್ ಹರಡಿ ರಕ್ತಹೀನತೆ ಹಾಗೂ ಲಿವರ್ ಸಮಸ್ಯೆ ಕಾಡುವ ಸಾಧ್ಯತೆಯೂ ಇದೆ.
ಕೊರೊನಾ ವೈರಸ್ ನಿಂದ ಪಾರಾಗಲು ಕಷಾಯ ಕುಡಿಯುವವರಿಗೆ ಈ ವಿಚಾರ ತಿಳಿದಿರಲಿ…!
ಸದಾ ದಣಿವು ಹಾಗೂ ನಿಶಕ್ತಿ ಕಿಸ್ಸಿಂಗ್ ರೋಗದ ಒಂದು ಲಕ್ಷಣ. ಆಗಾಗ ಜ್ವರ ಬರುವುದು. ತಲೆನೋವು ಹಾಗೂ ಗಂಟಲು ನೋವು ಕೂಡ ಈ ರೋಗದ ಲಕ್ಷಣಗಳಾಗಿವೆ. ಈ ರೋಗದಿಂದ ರಕ್ಷಣೆ ಬೇಕೆಂದಾದಲ್ಲಿ ಬೇರೆಯವರ ಎಂಜಲನ್ನು ಸೇವಿಸಬೇಡಿ. ಇದ್ರ ಜೊತೆಗೆ ಮುತ್ತಿನ ವಿಚಾರದಲ್ಲಿ ಕೆಲವೊಂದು ವಿಷಯಗಳ ಬಗ್ಗೆ ಗಮನವಿರಲಿ. ಮಕ್ಕಳಿಗೆ ಮುತ್ತಿಡಬೇಡಿ. ಅವರಿಗೂ ಸೋಂಕು ತಗಲುವ ಸಾಧ್ಯತೆಯಿರುತ್ತದೆ.