alex Certify ‘ಬೇಸಿಗೆ’ಯಲ್ಲಿ ಮಕ್ಕಳಿಗೆ ಅವಶ್ಯವಾಗಿ ಕುಡಿಸಿ ಈ ಡ್ರಿಂಕ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಬೇಸಿಗೆ’ಯಲ್ಲಿ ಮಕ್ಕಳಿಗೆ ಅವಶ್ಯವಾಗಿ ಕುಡಿಸಿ ಈ ಡ್ರಿಂಕ್ಸ್

ಕಾಲ ಯಾವುದೇ ಇರಲಿ. ನಮ್ಮ ಆರೋಗ್ಯದ ಜೊತೆ ಮಕ್ಕಳ ಆರೋಗ್ಯದ ಬಗ್ಗೆ ವಿಶೇಷ ಗಮನ ನೀಡಬೇಕಾಗುತ್ತದೆ. ಬೇಸಿಗೆಯಲ್ಲಂತೂ ಆರೋಗ್ಯ ಹದಗೆಡುವುದು ಜಾಸ್ತಿ. ದೇಹವನ್ನು ತಂಪಾಗಿರಿಸಲು ಕೆಲವೊಂದು ಪಾನೀಯಗಳ ಸೇವನೆ ಅಗತ್ಯ. ಮಕ್ಕಳ ದೇಹ ಬಹಳ ನಾಜೂಕಾಗಿರುತ್ತದೆ.

ಬಹು ಬೇಗ ಅವರು ಅನಾರೋಗ್ಯಕ್ಕೆ ತುತ್ತಾಗುತ್ತಾರೆ. ಬೇಸಿಗೆಯಲ್ಲಿ ಕೆಲವೊಂದು ಆರೋಗ್ಯಕರ ಪಾನೀಯಗಳನ್ನು ನೀಡಿ ಮಕ್ಕಳು ಹಾಸಿಗೆ ಹಿಡಿಯುವುದನ್ನು ತಪ್ಪಿಸಬಹುದು.

ಎಳನೀರಿನಲ್ಲಿ ಮಿನರಲ್ಸ್ ಪ್ರಮಾಣ ಜಾಸ್ತಿ ಇರುತ್ತದೆ. ಮಕ್ಕಳಿಗೆ ನೀರಿನ ಬದಲು ದಿನದಲ್ಲಿ ಎರಡು ಬಾರಿ ಎಳನೀರನ್ನು ನೀಡಿ.

ಬೇಸಿಗೆಯಲ್ಲಿ ಮಧ್ಯಾಹ್ನದ ವೇಳೆ ಮಕ್ಕಳಿಗೆ ಕಿತ್ತಳೆ ಹಣ್ಣಿನ ಜ್ಯೂಸ್ ಕುಡಿಯಲು ಕೊಡಿ. ಇದು ದೇಹವನ್ನು ತಂಪಾಗಿರಿಸುತ್ತದೆ. ಮನೆಯಲ್ಲಿಯೇ ಜ್ಯೂಸ್ ಮಾಡಿದ್ರೆ ಬಹಳ ಉತ್ತಮ.

ಆರೋಗ್ಯಕರ ಮಾವಿನಕಾಯಿ ಜ್ಯೂಸ್ ಒಮ್ಮೆ ಟ್ರೈ ಮಾಡಿ

ಮಕ್ಕಳ ದೇಹದ ಶಾಖ ಹೆಚ್ಚಾಗದಂತೆ ನೋಡಿಕೊಳ್ಳಬೇಕು. ಬೇಸಿಗೆಯಲ್ಲಿ ಹೆಚ್ಚೆಚ್ಚು ನೀರನ್ನು ಮಕ್ಕಳಿಗೆ ನೀಡಿ. ಆರು ತಿಂಗಳಿಗಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಈ ಟಿಪ್ಸ್ ಅನ್ವಯವಾಗುವುದಿಲ್ಲ.

ತಿಂಗಳಿಗೊಮ್ಮೆ ಹೆಸರು ಬೇಳೆ ಬೇಯಸಿ ಜ್ಯೂಸ್ ರೀತಿ ಮಾಡಿ ಕೊಡಬಹುದು. ಇದ್ರಲ್ಲಿ ಪ್ರೋಟೀನ್ ಸಿಗುತ್ತದೆ. ಇದ್ರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗಲಿದೆ.

ಮಜ್ಜಿಗೆ ದೇಹವನ್ನು ತಂಪಾಗಿಡುವ ಕೆಲಸ ಮಾಡುತ್ತದೆ. ಲಸ್ಸಿ ಬಹಳ ಒಳ್ಳೆಯದು. ಬಿಸಿಲ ಧಗೆಯಿಂದ ರಕ್ಷಣೆ ಪಡೆಯಲು ಇದು ಬೆಸ್ಟ್. ಸಂಜೆ ಸಮಯದಲ್ಲಿ ಲಸ್ಸಿ ಬೇಡ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...