ಬೇಸಿಗೆ ಕಾಲದಲ್ಲಿ ಮಕ್ಕಳು ಯಾವಾಗಲೂ ಅನಾರೋಗ್ಯಕ್ಕೆ ತುತ್ತಾಗುತ್ತಿರುತ್ತಾರೆ. ಅದರಲ್ಲೂ ಸರಿಯಾಗಿ ನೀರು ಕುಡಿಯದೇ ಇದ್ದರೆ ಮೂತ್ರದ ಸಮಸ್ಯೆ, ಮಲಬದ್ದತೆ ಮುಂತಾದ ಸಮಸ್ಯೆ ಕಾಡುತ್ತದೆ. ಆದ್ದರಿಂದ ಬೇಸಿಗೆ ಕಾಲದಲ್ಲಿ ಮಕ್ಕಳ ದೇಹ ತಂಪಾಗಿಸಲು, ಆರೋಗ್ಯವಾಗಿರಲು ಈ ಪಾನೀಯಗಳನ್ನು ಕುಡಿಸಬೇಕು.
ರೋಗ ನಿರೋಧಕ ಶಕ್ತಿ ಹೆಚ್ಚಾಗಲು ಇವುಗಳನ್ನು ತಪ್ಪದೇ ಸೀವಿಸಿ
* ಮಕ್ಕಳಿಗೆ ಬೇಸಿಗೆ ಕಾಲದಲ್ಲಿ ಎಳನೀರನ್ನು ಹೆಚ್ಚಾಗಿ ಕುಡಿಸಬೇಕು. ಇದರಲ್ಲಿರುವ ಮಿನರಲ್ಸ್ ನಿಶಕ್ತಿಯನ್ನು ದೂರ ಮಾಡುತ್ತದೆ.
* ಮಧ್ಯಾಹ್ನದ ವೇಳೆ ಮಕ್ಕಳಿಗೆ ಮನೆಯಲ್ಲಿಯೇ ಕಿತ್ತಳೆ ಹಣ್ಣಿನ ಜ್ಯೂಸ್ ಮಾಡಿ ಕುಡಿಯಲು ಕೊಡಬೇಕು. ಇದು ದೇಹವನ್ನು ತಂಪಾಗಿರಿಸುತ್ತದೆ.
* ವಾರಕ್ಕೊಮ್ಮೆ ಹೆಸರುಕಾಳಿನ ಜ್ಯೂಸ್ ಮಾಡಿ ಕುಡಿಸಬೇಕು. ಇದರಲ್ಲಿ ಪ್ರೋಟೀನ್ ಹೆಚ್ಚಾಗಿರುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗಲಿದೆ.
* ಬಿಸಿಲ ಧಗೆಯಿಂದ ದೇಹವನ್ನು ರಕ್ಷಿಸಲು ಮಜ್ಜಿಗೆಯನ್ನು ಕುಡಿಯಲು ನೀಡಬೇಕು. ಇದು ದೇಹವನ್ನು ತಂಪಾಗಿಡುತ್ತದೆ.