ಆರೋಗ್ಯವನ್ನು ಕಾಪಾಡಿಕೊಳ್ಳುವುದು ಇತ್ತೀಚೆಗಂತೂ ಸವಾಲಿನ ಕೆಲಸವಾಗಿದೆ. ಬೇಸಿಗೆಯ ರಣ ಬಿಸಿಲಿಗೆ ಸುಸ್ತಾಗುತ್ತದೆ ಎಂದು ಹೇಳುವುದನ್ನು ಸಾಮಾನ್ಯವಾಗಿ ಕೇಳಿರುತ್ತೀರಿ.
ಕಾಲಕ್ಕೆ ತಕ್ಕಂತೆ ಆಹಾರ ಸೇವಿಸುವುದರಿಂದ ಅನುಕೂಲವಾಗುತ್ತದೆ. ಜೊತೆಗೆ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ.
ಬೇಸಿಗೆಯಲ್ಲಿ ಬಾಯಾರಿಕೆ, ಬಳಲಿಕೆ, ಸುಸ್ತು ಆಗುತ್ತದೆ. ಬಿಸಿಲಿನ ಝಳಕ್ಕೆ ಮೈ ಉರಿ ಆಗುತ್ತದೆ. ಹಾಗಾಗಿ ಇವುಗಳಿಂದ ದೂರ ಇರಲು ತಂಪಾದ ಮಿತವಾದ ಆಹಾರ ಸೇವಿಸಬೇಕು. ಹೊಟ್ಟೆ ಬಿರಿಯುವಂತೆ ಊಟ ಮಾಡದೇ ಮಿತವಾಗಿ ಊಟ ಸೇವಿಸಬೇಕು. ಸುಲಭವಾಗಿ ಜೀರ್ಣವಾಗುವ ಪದಾರ್ಥ, ತರಕಾರಿಗಳನ್ನು ಆಹಾರದಲ್ಲಿ ಬಳಸಿದರೆ ಒಳ್ಳೆಯದು ಎನ್ನುತ್ತಾರೆ ತಜ್ಞರು.
ಮಜ್ಜಿಗೆ, ಹಣ್ಣಿನ ರಸ, ನಿಂಬೆ ಪಾನಕವನ್ನು ಬೇಸಿಗೆಯಲ್ಲಿ ಕುಡಿಯುವುದು ಒಳ್ಳೆಯದು. ಇದರೊಂದಿಗೆ ಕರಿದ ಪದಾರ್ಥಗಳು, ಸಿಹಿ ಪದಾರ್ಥಗಳನ್ನು ಜಾಸ್ತಿ ತಿನ್ನಬೇಡಿ. ಬೇಸಿಗೆಯಲ್ಲಿ ಜಾಸ್ತಿ ಸಿಗುವ ಕರಬೂಜ, ಕಲ್ಲಂಗಡಿ, ಮಾವು ಮೊದಲಾದ ಹಣ್ಣುಗಳನ್ನು ಸೇವಿಸಿರಿ. ಹೆಸರು ಬೇಳೆ ಪಾಯಸ ತಿನ್ನುವುದರಿಂದ ದೇಹ ತಂಪಾಗಿರುತ್ತದೆ. ಹೀಗೆ ಬೇಸಿಗೆಯಲ್ಲಿ ಆಹಾರದ ಬಗ್ಗೆ ಕಾಳಜಿ ವಹಿಸುವುದು ಆರೋಗ್ಯಕ್ಕೆ ಒಳ್ಳೆಯದು.