ಬೇಸಿಗೆ ಕಾಲದಲ್ಲಿ ದೇಹದಲ್ಲಿ ಶಕ್ತಿ ಇರಬೇಕು ಅಂದರೆ ಒಂದು ಲೋಟ ಕಬ್ಬಿನ ಹಾಲನ್ನ ಸೇವನೆ ಮಾಡೋದು ತುಂಬಾನೇ ಒಳ್ಳೆಯದು.
ಸೂರ್ಯನ ಅಗಾಧ ಶಾಖದಿಂದ ಪಾರಾಗಲು ನಿಮಗೆ ಕಬ್ಬಿನ ಹಾಲು ಸಹಕಾರಿ. ಇದು ಮಾತ್ರವಲ್ಲದೇ ಕಬ್ಬಿನ ಹಾಲಿನಲ್ಲಿ ಇನ್ನೂ ಅಗಾಧ ಪ್ರಮಾಣದ ಲಾಭ ಅಡಗಿದೆ. ‘
ಕಬ್ಬಿನ ಹಾಲಿಗೆ ದೇಹವನ್ನ ತಂಪಾಗಿರಿಸುವ ಶಕ್ತಿ ಇರೋದ್ರಿಂದ ಬೇಸಿಗೆ ಕಾಲದಲ್ಲಿ ಕುಡಿಯೋದು ತುಂಬಾನೆ ಒಳ್ಳೆಯದು. ವ್ಯಾಯಾಮಗಳನ್ನ ಮಾಡಿದ ಬಳಿಕ ಕಬ್ಬಿನ ಹಾಲನ್ನ ಸೇವಿಸೋದ್ರಿಂದ ದೇಹಕ್ಕೆ ಎನರ್ಜಿ ಸಿಗಲಿದೆ.
ಕಬ್ಬಿನ ಹಾಲಿನಲ್ಲಿ ಫಾಲಿಕ್ ಆಸಿಡ್ ಹಾಗೂ ವಿಟಾಮಿನ್ ಬಿ ಅಂಶ ಇರೋದ್ರಿಂದ ಗರ್ಭಿಣಿಯರಿಗೆ ಕೂಡ ಇದು ಸಹಕಾರಿ.
ಕಬ್ಬಿನ ಹಾಲಿನಲ್ಲಿ ಕ್ಯಾಲ್ಶಿಯಂ ಅಗಾಧ ಪ್ರಮಾಣದಲ್ಲಿದೆ. ಹೀಗಾಗಿ ಮೂಳೆಯ ಶಕ್ತಿ ಹೆಚ್ಚಾಗಲು ಕಬ್ಬಿನ ಹಾಲಿನ ಸೇವನೆ ಸೂಕ್ತ. ದುರ್ಬಲ ಹಲ್ಲು ಹಾಗೂ ಮೂಳೆ ಇರುವವರು ಕಬ್ಬಿನ ಹಾಲನ್ನ ಸೇವಿಸಲು ಆರಂಭಿಸಿ.
ಕಬ್ಬಿನ ಹಾಲಿನಲ್ಲಿ ಫೈಬರ್ ಅಂಶವಿದೆ. ಇದನ್ನ ಹೊರತುಪಡಿಸಿ ಕಬ್ಬಿನ ಹಾಲು ದೇಹದಲ್ಲಿರುವ ಕೆಟ್ಟ ಕೊಬ್ಬನ್ನ ಕರಗಿಸಲು ಸಹಕಾರಿ. ಹೀಗಾಗಿ ನೀವೇನಾದರೂ ತೂಕ ಇಳಿಕೆಯ ಪ್ರಕ್ರಿಯೆಯಲ್ಲಿದ್ದರೆ ನಿಮ್ಮ ಆಹಾರ ಕ್ರಮದಲ್ಲಿ ಕಬ್ಬಿನ ಹಾಲನ್ನೂ ಸೇರಿಸಿಕೊಳ್ಳಿ.
ಕಬ್ಬಿನ ಹಾಲಿನಲ್ಲಿ ಫ್ಲೇವೋನಾಯ್ಡ್ ಅಂಶವಿದೆ. ಇದು ಕ್ಯಾನ್ಸರ್ ಕೋಶಗಳು ಬೆಳೆಯೋದನ್ನ ತಪ್ಪಿಸುವ ಕಾರ್ಯ ಮಾಡುತ್ತೆ. ಇದರಿಂದಾಗಿ ಸ್ತನ ಕ್ಯಾನ್ಸರ್ ಉಂಟಾಗುವ ಸಾಧ್ಯತೆ ಕಡಿಮೆಯಾಗಲಿದೆ.