ಕೊರೊನಾ ವಿಶ್ವದ ಚಿತ್ರಣವನ್ನು ಬದಲಿಸಿದೆ. ಮೊದಲು ನೌಕರಿಗೆ ಹೆಚ್ಚು ಒತ್ತು ನೀಡ್ತಿದ್ದ ಜನ ಈಗ ಬ್ಯುಸಿನೆಸ್ ಗೆ ಒಲವು ತೋರುತ್ತಿದ್ದಾರೆ. ಅನೇಕರು ಕೃಷಿ ಕೆಲಸದತ್ತ ಚಿತ್ತ ಹರಿಸಿದ್ದಾರೆ. ಆರೋಗ್ಯದ ಜೊತೆಗೆ ಹೆಚ್ಚಿನ ಸಂಪಾದನೆ ಮಾಡಬಲ್ಲ ಕೃಷಿಯ ಹುಡುಕಾಟ ನಡೆಸುತ್ತಿದ್ದಾರೆ. ನೀವೂ ಇವರಲ್ಲಿ ಒಬ್ಬರಾಗಿದ್ದರೆ ಹೆಚ್ಚು ಲಾಭ ನೀಡಬಲ್ಲ ಕೃಷಿಯನ್ನು ನೀವು ಶುರು ಮಾಡಬಹುದು.
ಸುಲಭವಾಗಿ ಬೆಳೆಯಬಲ್ಲ ಹಾಗೂ ಲಾಭಕರ ಬೆಳೆಗಳಲ್ಲಿ ನುಗ್ಗೆ ಕಾಯಿ ಕೃಷಿಯೂ ಒಂದು. ಈ ಕೃಷಿ ಶುರು ಮಾಡಿ ವರ್ಷಕ್ಕೆ ಆರು ಲಕ್ಷ ಅಂದ್ರೆ ತಿಂಗಳಿಗೆ 50 ಸಾವಿರ ರೂಪಾಯಿವರೆಗೆ ಗಳಿಸಬಹುದು. ಒಂದು ಎಕರೆ ಭೂಮಿಯಲ್ಲಿ 10 ತಿಂಗಳಲ್ಲಿ 1 ಲಕ್ಷ ರೂಪಾಯಿ ಗಳಿಸಬಹುದು. ನುಗ್ಗೆ ಗಿಡ ಒಂದು ಔಷಧಿ ಸಸ್ಯ. ಒಮ್ಮೆ ಬಿತ್ತನೆ ಮಾಡಿದ ನಂತ್ರ ನಾಲ್ಕು ವರ್ಷ ಬಿತ್ತನೆ ಮಾಡಬೇಕಾಗಿಲ್ಲ. ಒಂದು ಗಿಡದ ಆಯಸ್ಸು ಸುಮಾರು 10 ವರ್ಷಗಳು.
ಈ ಕೃಷಿಗೆ ಹೆಚ್ಚಿನ ನೀರಿನ ಅಗತ್ಯವಿಲ್ಲ. ಇದಕ್ಕೆ ಹೆಚ್ಚು ಖರ್ಚು ಮಾಡಬೇಕಾಗಿಲ್ಲ. ಈಗಾಗಲೇ ಇರುವ ಬೇರೆ ಬೆಳೆಯ ಮಧ್ಯೆಯೇ ನುಗ್ಗಿ ಗಿಡ ಬೆಳೆಸಬಹುದು. ಬಿಸಿಲ ಪ್ರದೇಶದಲ್ಲಿ ಇದು ಬೇಗ ಬೆಳೆಯುತ್ತದೆ. ಇದಕ್ಕೆ 25ರಿಂದ 30 ಡಿಗ್ರಿ ಉಷ್ಣಾಂಶ ಬೇಕಾಗುತ್ತದೆ. ಇದ್ರ ಎಲೆ, ಹೂ, ಕಾಯಿ ಎಲ್ಲವೂ ಔಷಧಿ ಗುಣವನ್ನು ಹೊಂದಿದೆ. ಇದ್ರ ಬೀಜದಿಂದ ಎಣ್ಣೆ ತೆಗೆಯಲಾಗುತ್ತದೆ.
ಇಲ್ಲಿದೆ ಬಹುಪಯೋಗಿ ʼಲಕ್ಕಿ ಗಿಡʼದ ಪ್ರಯೋಜನ
300 ಕ್ಕೂ ಹೆಚ್ಚು ರೋಗಗಳನ್ನು ತಡೆಯುವ ಶಕ್ತಿ ಇದಕ್ಕಿದೆ. ಇದ್ರಲ್ಲಿ 92 ಜೀವಸತ್ವಗಳು, 46 ಆಂಟಿ-ಆಕ್ಸಿಡೆಂಟ್ ಗಳು, 36 ಪೆನ್ ಕಿಲ್ಲರ್ ಗಳು ಮತ್ತು 18 ವಿಧದ ಅಮೈನೋ ಆಮ್ಲಗಳಿವೆ. ಒಂದು ಎಕರೆಯಲ್ಲಿ ಸುಮಾರು 1,200 ಗಿಡಗಳನ್ನು ನೆಡಬಹುದು. ಎಕರೆ ಪ್ರದೇಶದಲ್ಲಿ ನುಗ್ಗೆ ಗಿಡ ನೆಡುವ ವೆಚ್ಚ ಸುಮಾರು 50 ರಿಂದ 60 ಸಾವಿರ ರೂಪಾಯಿಗಳು. ನುಗ್ಗೆ ಎಲೆಗಳನ್ನು ಮಾತ್ರ ಮಾರಾಟ ಮಾಡುವ ಮೂಲಕ ನೀವು ವಾರ್ಷಿಕವಾಗಿ 60 ಸಾವಿರ ರೂಪಾಯಿಗಳವರೆಗೆ ಗಳಿಸಬಹುದು.