ಧೂಮಪಾನ ಆರೋಗ್ಯಕ್ಕೆ ಹಾನಿಕರ. ಈ ಸಂಗತಿ ಎಲ್ಲರಿಗೂ ಗೊತ್ತು. ಸಿಗರೇಟ್ ಪ್ಯಾಕ್ ಮೇಲಿಯೇ ಇದು ಬರೆದಿರುತ್ತದೆ. ಆದ್ರೆ ಧೂಮಪಾನಿಗಳ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ. ದಿನಕ್ಕೆ ಒಂದೊಂದು ಪ್ಯಾಕ್ ಸಿಗರೇಟ್ ಸೇದುವವರ ಸಂಖ್ಯೆ ನಮ್ಮಲ್ಲಿದೆ. ಸಮೀಕ್ಷೆಯೊಂದು ಇದಕ್ಕೆ ಸಂಬಂಧಿಸಿದಂತೆ ಆಘಾತಕಾರಿ ಸುದ್ದಿಯನ್ನು ಹೊರ ಹಾಕಿದೆ.
ಸಮೀಕ್ಷೆ ಪ್ರಕಾರ 14 ದೇಶಗಳಲ್ಲಿರುವ ಶೇಕಡಾ 60 ರಷ್ಟು ಭಾರತೀಯರು ಬೆಳಿಗ್ಗೆ ಎದ್ದ ತಕ್ಷಣ ಧೂಮಪಾನ ಮಾಡ್ತಾರಂತೆ. ಆದ್ರೆ ಶೇಕಡಾ 48 ರಷ್ಟು ಮಂದಿ ಮಾತ್ರ ಧೂಮಪಾನ ಮಾಡ್ತೆವೆ ಎಂಬುದನ್ನು ಒಪ್ಪಿಕೊಂಡಿದ್ದಾರಂತೆ. ಕ್ಯಾಂಟರ್ ಈ ಸಮೀಕ್ಷೆ ನಡೆಸಿದೆ.
ಭಾರತೀಯರಿಗೆ ಸಿಗರೇಟಿನಿಂದಾಗುವ ಹಾನಿಗಳ ಬಗ್ಗೆ ಜಾಗೃತಿ ಮೂಡಿಸುವ ಅವಶ್ಯಕತೆಯಿದೆ ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ. ಧೂಮಪಾನದ ವಿರುದ್ಧ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುವ ಬದಲು ಇ-ಸಿಗರೇಟ್ ನಿಷೇಧಕ್ಕೆ ಚಿಂತನೆ ನಡೆಸುತ್ತಿದೆ. ಮುಂದುವರೆದ ದೇಶಗಳಲ್ಲಿ ಇ-ಸಿಗರೇಟ್ ಪ್ರಸಿದ್ಧಿ ಪಡೆದಿದೆ. ತಂಬಾಕು ಸಿಗರೇಟ್ ಗಿಂತ ಇ-ಸಿಗರೇಟ್ ಸುರಕ್ಷಿತವೆಂದು ಅಲ್ಲಿನ ಸರ್ಕಾರಗಳು ಭಾವಿಸಿವೆ.