ನವಜಾತ ಶಿಶುವಿಗೇನಾದ್ರೂ ಆದ್ರೆ ಹೆತ್ತವರು ಆತಂಕಕ್ಕೆ ಒಳಗಾಗ್ತಾರೆ. ವೈದ್ಯರು ಮತ್ತು ನರ್ಸ್ ಗಳ ಜೊತೆ ಒರಟಾಗಿ ವರ್ತಿಸ್ತಾರೆ. ಆದ್ರೆ ಇಂತಹ ವರ್ತನೆ ಅವರ ಮಕ್ಕಳ ಪಾಲಿಗೆ ಅಪಾಯಕಾರಿ.
ದುರ್ಬಲ ಅಥವಾ ಅನಾರೋಗ್ಯಕ್ಕೊಳಗಾಗಿರುವ ಮಗುವಿಗೆ ಚಿಕಿತ್ಸೆ ನೀಡುವ ತಂಡದ ಜೊತೆಗೆ ಹೆತ್ತವರು ಸರಿಯಾಗಿ ನಡೆದುಕೊಳ್ಳುವುದಿಲ್ಲ. ಭಯ ಮತ್ತು ಒತ್ತಡದಲ್ಲಿ ಅವರ ಮೇಲೆ ಕೂಗಾಡುತ್ತಾರೆ, ಇದರಿಂದ ಮಗುವಿಗೆ ಉತ್ತಮ ಗುಣಮಟ್ಟದ ಚಿಕಿತ್ಸೆ ದೊರೆಯುವುದಿಲ್ಲ. ಸಂಶೋಧನೆಯೊಂದರಲ್ಲೂ ಈ ವಿಷಯ ಬಯಲಾಗಿದೆ.
ಒರಟಾಗಿ ವರ್ತಿಸುವ ಪೋಷಕರಿಂದ ಮಕ್ಕಳಿಗೆ ತೊಂದರೆಯಾಗುವ ಸಾಧ್ಯತೆ ಹೆಚ್ಚು. ಅವರು ಹೊಡೆದಾಟ, ಕೂಗಾಟ ಅಥವಾ ಇನ್ಯಾವುದೇ ಕೆಟ್ಟ ಕೆಲಸಕ್ಕೆ ಮುಂದಾಗುವುದಿಲ್ಲ. ಬದಲಾಗಿ ವೈದ್ಯರಿಗೆ ಇಷ್ಟವಾಗದಂತಹ ಮಾತುಗಳನ್ನಾಡುತ್ತಾರೆ. ಇದು ಬೇಕಂತ ಮಾಡುವುದಲ್ಲ, ಮಗುವಿನ ಆರೋಗ್ಯದ ಬಗೆಗಿನ ಭಯದಲ್ಲಿ ಬರುವ ಮಾತು.
ಹೆತ್ತವರಿಗೆ ಮಕ್ಕಳ ಆರೋಗ್ಯದ ಬಗ್ಗೆ ಟೆನ್ಷನ್ ಇರೋದು ಸಹಜ. ಆದ್ರೆ ಅವರು ತಮ್ಮ ವರ್ತನೆಯನ್ನು ಸರಿಪಡಿಸಿಕೊಳ್ಳಬೇಕು. ಹಾಗಾದಲ್ಲಿ ಮಾತ್ರ ವೈದ್ಯರು ಸರಿಯಾದ ಸಮಯಕ್ಕೆ ಮಗುವಿಗೆ ಸೂಕ್ತ ಚಿಕಿತ್ಸೆ ನೀಡಲು ಸಾಧ್ಯ. ಮಗುವಿನ ಸ್ಥಿತಿ ಚಿಂತಾಜನಕವಾಗಿದ್ದಾಗ ಪೋಷಕರ ಅತಿರೇಕದ ವರ್ತನೆಯ ದುಷ್ಪರಿಣಾಮ ಹೆಚ್ಚಾಗಿರುತ್ತದೆ. ಯಾಕಂದ್ರೆ ಉತ್ತಮ ವಾತಾವರಣವಿಲ್ಲದೇ ಇದ್ರೆ ಸಹಜವಾಗಿಯೇ ವೈದ್ಯರ ಕರ್ತವ್ಯದ ಮೇಲೆ ಎಫೆಕ್ಟ್ ಆಗುತ್ತದೆ ಎನ್ನಲಾಗಿದೆ.