ಆಶ್ಚರ್ಯವಾಯ್ತಾ…? ಯಸ್, ದಿನ ದಿನಕ್ಕೂ ನಿಮ್ಮ ತೂಕ ಹೆಚ್ಚಾಗಲು ನಿಮ್ಮ ಪ್ರೀತಿ ಒಂದು ಕಾರಣ ಅಂದ್ರೆ ನಂಬಲೇಬೇಕು. ಪ್ರೀತಿಗೆ ಬಿದ್ದ ವ್ಯಕ್ತಿ ತೂಕ ಹೆಚ್ಚಾಗೋದ್ರಲ್ಲಿ ಅನುಮಾನವಿಲ್ಲ. ಇದಕ್ಕೆ ಕಾರಣ ಏನು ಎನ್ನುವ ನಿಮ್ಮ ಪ್ರಶ್ನೆಗೆ ಉತ್ತರ ಇಲ್ಲಿದೆ.
ಸಂಗಾತಿ ಸಿಗುವ ಮೊದಲು ಫಿಟ್ ನೆಸ್ ಕಾಪಾಡಿಕೊಳ್ಳುತ್ತಿದ್ದವರು ಸಂಗಾತಿ ಸಿಗ್ತಿದ್ದಂತೆ ಮರೆತಿದ್ದಾರೆ. ಕಸರತ್ತು ಮಾಡಿ ಸಮಯ ಹಾಳು ಮಾಡೋದು ಏಕೆ. ಸಂಗಾತಿ ಜೊತೆ ಕಾಲ ಕಳೆಯಲು ಮುಂದಾಗ್ತೀರಾ. ಇದ್ರಿಂದ ನಿಮ್ಮ ಫಿಟ್ನೆಸ್ ಹಾಳಾಗಿ ತೂಕ ಏರಲು ಶುರುವಾಗುತ್ತದೆ.
ಪ್ರೀತಿಯಲ್ಲಿ ಬಿದ್ದವರು ಜಗತ್ತು ಮರೆಯುತ್ತಾರೆ. ಪ್ರೀತಿಸಿದ ವ್ಯಕ್ತಿಯೇ ಸರ್ವಸ್ವ ಎನ್ನುವಂತಾಗುತ್ತದೆ. ಸಂಗಾತಿ ತಿನ್ನುವ ಆರೋಗ್ಯಕರ, ಅನಾರೋಗ್ಯಕರ ಆಹಾರವೆಲ್ಲ ನಿಮ್ಮ ಹೊಟ್ಟೆ ಸೇರುತ್ತದೆ. ಸಂಗಾತಿ ಜೊತೆ ಹೆಚ್ಚು ಸಮಯ ಕಳೆಯುವ ಖುಷಿಯಲ್ಲಿ ಆರೋಗ್ಯಕ ಆಹಾರ ಸೇವನೆಯನ್ನು ಮರೆತು ಬಿಡ್ತೀರಾ.
ಪ್ರೀತಿಯಲ್ಲಿ ಬಿದ್ದ ಮೇಲೆ ಸಣ್ಣಪುಟ್ಟ ಮುನಿಸು ಮಾಮೂಲಿ. ಇದು ಒತ್ತಡಕ್ಕೆ ಕಾರಣವಾಗುತ್ತದೆ. ಒತ್ತಡ ನಿದ್ರಾಹೀನತೆ ಜೊತೆಗೆ ತೂಕ ಏರಿಕೆಗೆ ದಾರಿ ಮಾಡಿ ಕೊಡುತ್ತದೆ.
ಪ್ರೀತಿಯಲ್ಲಿ ಉಡುಗೊರೆ ಸಾಮಾನ್ಯ. ಸಂಗಾತಿ ಖುಷಿಪಡಿಸಲು ಚಾಕೋಲೇಟ್, ಕೇಕ್ ಅಂತಾ ಸ್ವೀಟ್ ನೀಡಲು ಶುರುಮಾಡ್ತೀರಾ. ಪ್ರೀತಿಯಿಂದ ಸಂಗಾತಿ ನೀಡಿದ ಚಾಕೋಲೇಟ್ ಗೊತ್ತಿಲ್ಲದೆ ಹೊಟ್ಟೆ ಸೇರುತ್ತದೆ. ಅರಿವಿಲ್ಲದೆ ತೂಕ ಹೆಚ್ಚಾಗುತ್ತದೆ.