ಫೇಸ್ಬುಕ್ ನಲ್ಲಿ ನಿಮ್ಮನ್ನು ನೀವು ಇತರರೊಂದಿಗೆ ಹೋಲಿಸಿಕೊಂಡಲ್ಲಿ ಅದು ಖಿನ್ನತೆಗೆ ದಾರಿ ಮಾಡಿಕೊಡಬಹುದು ಅನ್ನೋದನ್ನು ವಿಶ್ವವಿದ್ಯಾನಿಲಯವೊಂದು ಸಂಶೋಧಿಸಿದೆ.
ಸೋಶಿಯಲ್ ನೆಟ್ವರ್ಕಿಂಗ್ ಹಾಗು ಖಿನ್ನತೆ ಬಗ್ಗೆ ಸಂಶೋಧನೆ ನಡೆಸಿರುವ ಪ್ರೊಫೆಸರ್ ಗಳು ಈ ಬಗ್ಗೆ ಜನಾಭಿಪ್ರಾಯ ಸಂಗ್ರಹಿಸಿದ್ದಾರೆ. ಫೇಸ್ಬುಕ್ ನಲ್ಲಿ ಸಮಯ ಕಳೆಯುತ್ತ ಕಳೆಯುತ್ತ ಖಿನ್ನತೆ ಮನಸ್ಸಿನಲ್ಲಿ ಮೂಡುತ್ತದೆ.
ಸಾಮಾಜಿಕ ತಾಣ ಹಾಗೂ ಖಿನ್ನತೆ ನಡುವಣ ಸಂಬಂಧ ಅತ್ಯಂತ ಸಂಕೀರ್ಣವಾದುದು, ವಯಸ್ಸು ಮತ್ತು ಲಿಂಗವನ್ನು ಇದು ಅವಲಂಬಿಸಿದೆ. ಫೇಸ್ಬುಕ್ ನಲ್ಲಿ ಇತರರೊಂದಿಗೆ ನಿಮ್ಮನ್ನು ನೀವು ನೆಗೆಟಿವ್ ಆಗಿ ಹೋಲಿಕೆ ಮಾಡಿಕೊಳ್ಳುತ್ತೀರಾ ಎಂದಾದಲ್ಲಿ ಅದು ಖಿನ್ನತೆಯ ಲಕ್ಷಣ.
ಉಗುರಿನಲ್ಲೂ ಅಡಗಿದೆ ಸೌಂದರ್ಯದ ರಹಸ್ಯ
ಫೇಸ್ಬುಕ್ ನಲ್ಲಿ ಇತರರನ್ನು ಗಮನಿಸುವುದು, ಮಾಜಿ ಪಾರ್ಟನರ್ ಗಳನ್ನು ಸ್ನೇಹಿತರನ್ನಾಗಿ ಮಾಡಿಕೊಳ್ಳುವುದು, ಪದೇ ಪದೇ ನೆಗೆಟಿವ್ ಆಗಿ ಸ್ಟೇಟಸ್ ಅಪ್ ಡೇಟ್ ಗಳನ್ನು ಹಾಕುವುದು ಖಿನ್ನತೆಯ ಪ್ರಮುಖ ಲಕ್ಷಣಗಳು. ಆದ್ರೆ ಸಾಮಾಜಿಕ ತಾಣಗಳನ್ನು ಸೂಕ್ತವಾಗಿ ಬಳಸಿಕೊಂಡ್ರೆ ಅದು ಖಿನ್ನತೆಯನ್ನು ದೂರ ಕೂಡ ಮಾಡಬಲ್ಲದು.