ಕೋವಿಡ್ ಲಾಕ್ಡೌನ್ ನಡುವೆ ಮಕ್ಕಳ ಆರೋಗ್ಯದಲ್ಲಿ ಏರುಪೇರಾದ ವೇಳೆ ಪೋಷಕರು ವೈದ್ಯರ ಬಳಿ ಆತಂಕದಿಂದ ಧಾವಿಸುತ್ತಿರುವುದು ಸಾಮಾನ್ಯ ಎಂಬಂತಾಗಿಬಿಟ್ಟಿದೆ. ಕೋವಿಡ್ನ ಮೂರನೇ ಅಲೆಯು ಹೆತ್ತವರಿಗಿಂತ ಮಕ್ಕಳ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿದೆ ಎಂದು ತಜ್ಞರು ಎಚ್ಚರಿಸಿರುವ ಹಿನ್ನೆಲೆಯಲ್ಲಿ ಹೆತ್ತವರ ಆತಂಕ ಹಿಂದೆಂದಿಗಿಂತ ಹೆಚ್ಚಾಗಿದೆ.
ಲಾಕ್ಡೌನ್ ಅವಧಿಯಲ್ಲಿ ಮಕ್ಕಳ ತೂಕದಲ್ಲಿ ವಿಪರೀತ ಏರಿಕೆಯಾಗುತ್ತಿರುವ ಕಾರಣ ಅವರಲ್ಲಿ ಬೊಜ್ಜು ಶೇಖರಣೆ ಅಧಿಕವಾಗಿ ರೋಗಗಳು ಬರುವ ಸಾಧ್ಯತೆಗಳು ಬಹಳ ಆಗಿದೆ. ಈ ಕಾರಣದಿಂದ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತಿದೆ.
ಆದಾಯ ತೆರಿಗೆ ಪಾವತಿದಾರರಿಗೆ ಮತ್ತೊಂದು ಗುಡ್ ನ್ಯೂಸ್: ಹೊಸ ಇ –ಫೈಲಿಂಗ್ ಪೋರ್ಟಲ್ ಗೆ ಚಾಲನೆ
ಒಂದು ವರ್ಷಕ್ಕಿಂತಲೂ ಹೆಚ್ಚು ಕಾಲ ಮನೆಯಲ್ಲೇ ಇರುವ ಕಾರಣ ಹೊರಾಂಗಣ ಆಟಗಳಿಲ್ಲದೇ ಮಕ್ಕಳಲ್ಲಿ ಆಲಸ್ಯ ಮೈಗೂಡಿದ್ದು, ಜೊತೆಗೆ ಕುರುಕಲು ತಿಂಡಿಗಳನ್ನು ತಿನ್ನುವ ಕಾರಣ ಈ ಸಮಸ್ಯೆ ಇನ್ನಷ್ಟು ಉಲ್ಪಣಗೊಂಡಿದೆ. ಪ್ರಸಕ್ತ ಸ್ಥಿತಿಯಲ್ಲಿ ರೋಗ ನಿರೋಧಕ ಶಕ್ತಿ ಕುಂಠಿತಗೊಳ್ಳುವುದು ಮಕ್ಕಳು ಮಾತ್ರವಲ್ಲದೇ ಎಂಥವರಿಗೂ ಸಹ ಸಮಸ್ಯೆ ಎಂಬಂತೆ ಆಗಿದೆ.
ಕೋವಿಡ್ನ ಮೂರನೇ ಅಲೆಯ ವೇಳೆ 12 ವರ್ಷ ವಯಸ್ಸಿನ ಒಳಗಿನ ಮಕ್ಕಳಿಗೆ ಪರಿಣಾಮ ಹೆಚ್ಚಾಗಿ ಆಗುವ ಸಾಧ್ಯತೆ ಇದ್ದು, ಹೆತ್ತವರು ಸಾಧ್ಯವಾದಷ್ಟು ಬೇಗ ಲಸಿಕೆ ಪಡೆದುಕೊಂಡು ತಮ್ಮ ಮಕ್ಕಳ ಆರೋಗ್ಯವನ್ನು ಖಾತ್ರಿ ಪಡಿಸಿಕೊಳ್ಳಬೇಕಿದೆ ಎಂದು ತಜ್ಞರು ತಿಳಿಸಿದ್ದಾರೆ.