ಕೊರೊನಾ ವೈರಸ್ ವಿರುದ್ಧ ರೋಗನಿರೋಧಕ ಶಕ್ತಿ ಹೆಚ್ಚಿಸಲು ಲಸಿಕೆ ಅಭಿಯಾನ ದೇಶಾದ್ಯಂತ ಮುಂದುವರೆದಿದೆ. ಇಲ್ಲಿಯವರೆಗೆ 80 ದಶಲಕ್ಷಕ್ಕೂ ಹೆಚ್ಚಿನ ಲಸಿಕೆ ನೀಡಲಾಗಿದೆ. ಕೋವಿಶೀಲ್ಡ್ ಮತ್ತು ಕೋವಾಕ್ಸಿನ್ ಲಸಿಕೆಯನ್ನು ದೇಶದ ಜನರಿಗೆ ನೀಡಲಾಗ್ತಿದೆ. ಕೋವಿಶೀಲ್ಡ್ ನ ಎರಡನೇ ಡೋಸ್ ಅನ್ನು 6 ವಾರಗಳ ನಂತರ ತೆಗೆದುಕೊಳ್ಳಬಹುದು. ಕೋವಾಕ್ಸಿನ್‌ನ ಮೊದಲ ಮತ್ತು ಎರಡನೆಯ ಡೋಸ್ ನಡುವೆ 28 ದಿನಗಳ ಅಂತರವಿರಬೇಕು.
ಮೊದಲ ಡೋಸ್ ಹಾಕಿದ ತಕ್ಷಣ ನಿಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಬರುವುದಿಲ್ಲ. ಎರಡನೇ ಡೋಸ್ ಅಗತ್ಯವಿದೆ. ಎರಡನೇ ಡೋಸ್ ಹಾಕಿದ 15 ದಿನಗಳ ನಂತ್ರ ಕೊರೊನಾ ವಿರುದ್ಧ ಹೋರಾಡಲು ನಿಮ್ಮ ದೇಹ ಸದೃಢವಾಗುತ್ತದೆ. ಒಂದು ವೇಳೆ ಮೊದಲ ಡೋಸ್ ನಂತ್ರ ಕೊರೊನಾ ಕಾಡಿದ್ರೆ ಏನು ಮಾಡಬೇಕು ಎಂಬ ಪ್ರಶ್ನೆ ಕಾಡುತ್ತದೆ.
ಮೊದಲ ಡೋಸ್ ನಂತ್ರ ಕೊರೊನಾ ಕಾಣಿಸಿಕೊಂಡಲ್ಲಿ ಮೊದಲು ಇದಕ್ಕೆ ಚಿಕಿತ್ಸೆ ಪಡೆಯುವ ಅಗತ್ಯವಿದೆ. ಕೊರೊನಾ ಸಂಪೂರ್ಣವಾಗಿ ಗುಣವಾಗಿ, ವರದಿ ನೆಗೆಟಿವ್ ಬಂದ ನಂತ್ರ ವೈದ್ಯರ ಸಲಹೆ ಮೇರೆಗೆ ಲಸಿಕೆಯ ಎರಡನೇ ಡೋಸ್ ಹಾಕಿಕೊಳ್ಳಬೇಕು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.