ತಪ್ಪು ಜೀವನ ಶೈಲಿ, ಆಹಾರ ಪದ್ಧತಿ ತೂಕ ಏರಿಕೆಗೆ ಕಾರಣವಾಗ್ತಿದೆ. ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಜಿಮ್, ವ್ಯಾಯಾಮ, ಯೋಗದ ಜೊತೆ ಡಯೆಟ್ ಮಾಡಿದ್ರೂ ಕೆಲವರ ತೂಕ ಮಾತ್ರ ಇಳಿಯೋದಿಲ್ಲ. ತೂಕ ಇಳಿಸಿಕೊಳ್ಳುವ ಸುಲಭ ಉಪಾಯವನ್ನು ಸಂಶೋಧಕರು ಹೇಳಿದ್ದಾರೆ.
ಸಂಶೋಧಕರ ಪ್ರಕಾರ, ಪ್ರತಿ ದಿನ ಎರಡು ಗಂಟೆ ಮನೆ ಕೆಲಸ ಮಾಡಿದ್ರೆ ತೂಕ ಕಡಿಮೆಯಾಗುತ್ತದೆ. ಮಹಿಳೆಯರು ಮನೆ ಕೆಲಸವನ್ನು ಸುಲಭ ಮಾಡಿಕೊಂಡಿದ್ದಾರೆ. ಮನೆ ಕ್ಲೀನಿಂಗ್, ಬಟ್ಟೆ ತೊಳೆಯುವುದು ಸೇರಿದಂತೆ ಎಲ್ಲ ಕೆಲಸಗಳಿಗೆ ಯಂತ್ರಗಳ ಬಳಕೆ ಮಾಡಲಾಗ್ತಿದೆ. ಇದ್ರ ಬದಲು ಮೈ ಬಗ್ಗಿಸಿ ಕೆಲಸ ಮಾಡಿದ್ರೆ ತೂಕ ಇಳಿಯುವುದು ಸುಲಭ ಎನ್ನುತ್ತಾರೆ ಸಂಶೋಧಕರು.
ನೆಲ ಒರೆಸುವುದು, ಕಸ ತೆಗೆಯುವುದ್ರಿಂದ 300 ರಿಂದ 500 ರಷ್ಟು ಕ್ಯಾಲೋರಿ ಬರ್ನ್ ಆಗುತ್ತದೆ. ಕೈಗಳಿಗೆ ವ್ಯಾಯಾಮವಾಗುತ್ತದೆ. ಪದೇ ಪದೇ ಎದ್ದು, ಕುಳಿತು ಮಾಡುವುದ್ರಿಂದ ಹೊಟ್ಟೆ, ತೊಡೆಯ ಕೊಬ್ಬು ಕಡಿಮೆಯಾಗುತ್ತದೆ. ವಾಷಿಂಗ್ ಮಶಿನ್ ಬದಲು ಕೈನಲ್ಲಿ ಬಟ್ಟೆ ತೊಳೆಯುವುದ್ರಿಂದ ನೀವು ಫಿಟ್ ಆಗಿರಲು ಸಾಧ್ಯ. ಇಡೀ ದೇಹಕ್ಕೂ ವ್ಯಾಯಾಮವಾಗುತ್ತದೆ. ಬಟ್ಟೆ ತೊಳೆಯುವುದ್ರಿಂದ ಅತಿ ಹೆಚ್ಚು ಕ್ಯಾಲೋರಿ ಬರ್ನ್ ಆಗುತ್ತದೆಯಂತೆ.
ನೀರು ಕೂಡ ತೂಕ ಇಳಿಸುವಲ್ಲಿ ಮಹತ್ವದ ಕೆಲಸ ಮಾಡುತ್ತದೆ. ನೀರು ದೇಹದ ಕಲ್ಮಶವನ್ನು ಹೊರ ಹಾಕಿ ದೇಹವನ್ನು ಆರೋಗ್ಯವಾಗಿಡುತ್ತದೆ. ದೇಹದಲ್ಲಿ ನೀರಿನ ಮಟ್ಟ ಕಡಿಮೆಯಾದ್ರೆ ಆಲಸ್ಯ ಹೆಚ್ಚಾಗುತ್ತದೆ. ಶರೀರದಲ್ಲಿ ನೀರಿನ ಅಂಶ ಹೆಚ್ಚಿದ್ದರೆ ಕೆಲಸ ಮಾಡುವುದು ಸುಲಭ.