ತೂಕ ಇಳಿಸಿಕೊಳ್ಳಲು ಕಡಿಮೆ ಕ್ಯಾಲೋರಿ ಇರುವ ಆಹಾರ ಸೇವಿಸಬೇಕು. ಆದರೆ ಇದರಿಂದ ಹಸಿವು ಉಂಟಾಗುತ್ತದೆ. ಈ ಹಸಿವನ್ನು ನಿಗ್ರಹಿಸಲು ಹೆಚ್ಚು ಪ್ರೋಟೀನ್ ಆಹಾರ ಸೇವಿಸಬೇಕು. ಹಾಗಾಗಿ ತೂಕ ಇಳಿಸಿಕೊಳ್ಳಲು ಪ್ರಯತ್ನಿಸುವವರಿಗೆ ಹೆಚ್ಚು ಪ್ರೋಟೀನ್ ಇರುವ ಕಡಿಮೆ ಕ್ಯಾಲೋರಿ ಇರುವ ಆಹಾರಗಳು ತುಂಬಾ ಸಹಕಾರಿಯಾಗಿದೆ. ಅಂತಹ ಆಹಾರಗಳು ಇಲ್ಲಿವೆ.
* ಬೇಯಿಸಿದ ಕಪ್ಪು ಬೀನ್ಸ್ : 100ಗ್ರಾಂ ಬೇಯಿಸಿದ ಕಪ್ಪು ಬೀನ್ಸ್ ನಲ್ಲಿ 8.8 ಗ್ರಾಂ ಪ್ರೋಟೀನ್ ಹಾಗೂ 132 ಕ್ಯಾಲೋರಿ ಇರುತ್ತದೆ.
* ಬೇಯಿಸಿದ ಮೀನು : ಇದರಲ್ಲಿ ಒಮೆಗಾ 3 ಅಧಿಕವಾಗಿದ್ದು, ಹೃದ್ರೋಗ ಕಾಯಿಲೆಯ ಅಪಾಯವನ್ನು ದೂರಮಾಡುತ್ತದೆ. 100ಗ್ರಾಂ ಬೇಯಿಸಿದ ಮೀನು 29.21 ಗ್ರಾಂ ಪ್ರೋಟೀನ್ ಮತ್ತು 184 ಕ್ಯಾಲೋರಿಗಳನ್ನು ಹೊಂದಿರುತ್ತದೆ.
ಮುಖದ ಕೊಬ್ಬು ಕರಗಿಸಲು ಈ ವ್ಯಾಯಾಮ ಸಹಕಾರಿ
* ಮೊಟ್ಟೆಗಳು : ಇದರಲ್ಲಿ ಪ್ರೋಟೀನ್ ಸಮೃದ್ಧವಾಗಿದೆ. 100ಗ್ರಾಂ ಮೊಟ್ಟೆಯಲ್ಲಿ 12.5 ಗ್ರಾಂ ಪ್ರೋಟೀನ್, 143 ಕ್ಯಾಲೋರಿಗಳಿರುತ್ತದೆ.
* ಚಿಕನ್ ಬ್ರೆಸ್ಟ್ : ಇದರ 100ಗ್ರಾಂ ನಲ್ಲಿ 24ಗ್ರಾಂ ಪ್ರೋಟೀನ್ ಮತ್ತು 143 ಕ್ಯಾಲೋರಿಗಳನ್ನು ಹೊಂದಿರುತ್ತದೆ.