![](https://kannadadunia.com/wp-content/uploads/2020/06/deep-cleaning-shoes.jpg)
ನಾವು ಶೂ ಧರಿಸಿ ಅಡ್ಡಾಡುತ್ತೇವೆ. ಅದಕ್ಕೆ ಕೊರೊನಾ ವೈರಸ್ ತಾಕಿಕೊಂಡಿದ್ದರೆ ಎಂಬ ಭಯವೂ ಇರುತ್ತದೆ. ಆದರೆ, ಶೂ ಅನ್ನು ಕೊರೊನಾ ಸೋಂಕು ಮುಕ್ತ ಮಾಡುವುದು ಹೇಗೆ…? ಜೊತೆಗೆ ಶೂಗೆ ಯಾವುದೇ ಹಾನಿಮಾಡದೆ ಸ್ಯಾನಿಟೈಸ್ ಮಾಡುವುದು ಹೇಗೆಂಬ ಬಗ್ಗೆ ಬಾಟಾ ಕಂಪನಿ ಹೇಳಿಕೊಂಡಿದೆ.
ಬ್ಲೀಚ್ ಫ್ರೀ ವೈಪ್ಸ್ ಬಳಕೆ ಮಾಡುವುದು ಉತ್ತಮ. ಇವು ತುಂಬಾ ಮೃದುವಾಗಿರೋದ್ರಿಂದ ಶೂಗೆ ಯಾವುದೇ ರೀತಿ ಹಾನಿಯಾಗುವುದಿಲ್ಲ.
ದಿನನಿತ್ಯ ಮನೆಯಲ್ಲಿ ಬಳಕೆ ಮಾಡುವ ಡಿಟರ್‌ಜೆಂಟ್, ಆ್ಯಂಟಿಸೆಪ್ಟಿಕ್‌ಗಳು, ಆಲ್ಕೋಹಾಲ್ ಅನ್ನು ಬಳಕೆ ಮಾಡಬಹುದಾಗಿದ್ದು, ಇದನ್ನು ಬಳಸುವಾಗ 30 ಮೀಟರ್ ದೂರದಿಂದ ಶೂಗೆ ಸ್ಪ್ರೇ ಮಾಡಬೇಕು. ಆದರೆ ಈ ರೀತಿ ಮಾಡುವಾಗ ಒಂದು ವಿಷಯ ನೆನಪಿನಲ್ಲಿಡಿ, ಈ ಲಿಕ್ವಿಡ್ ಗಳಲ್ಲಿ ಆಲ್ಕೋಹಾಲ್ ಅಂಶ ಹೆಚ್ಚು ಪ್ರಮಾಣದಲ್ಲಿರುವುದರಿಂದ ಬಾಳಿಕೆ ಬರುವ, ಅದರಲ್ಲೂ ಲೆದರ್ ಶೂಗಳಿಗೆ ಹಾನಿಯಾಗುವ ಸಂಭವವಿರುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.
ಈ ಎಲ್ಲ ವಿಷಯಗಳ ಬಗ್ಗೆ ಗಮನಹರಿಸಿದರೆ ಸಾಕು. ಸ್ಯೂಡ್ ಮತ್ತು ಸುಬಕ್ ಲೆದರ್‌ಗಳಿಗೆ ಇವುಗಳನ್ನು ಬಳಸುವಂತಿಲ್ಲ. ನಿಮ್ಮ ಪಾದರಕ್ಷೆ ಕ್ಯಾನ್ವಾಸ್ ಅಥವಾ ಮೆಷ್‌ನಂತ ಫ್ಯಾಬ್ರಿಕ್‌ದಾಗಿದ್ದರೆ ಹೆಚ್ಚು ಟೆಂಪ್ರೆಚರ್ ಇಟ್ಟು ಮಷಿನ್ ವಾಷ್ ಮಾಡುವುದು ಸುರಕ್ಷಿತ.
ವೆಂಟಿಲೇಟೆಡ್ ಪ್ರದೇಶದಲ್ಲಿ ನಿಮ್ಮ ಶೂಗಳನ್ನು ಏರ್ ಡ್ರೈ ಮಾಡಬೇಕು. ಶೂಗಳನ್ನು ಒಣಗಿಸಲು ಇದು ಉತ್ತಮ ಉಪಾಯವಾಗಿದೆ.
ಶೂ ಸ್ವಚ್ಛಗೊಳಿಸುವ ಸಂದರ್ಭದಲ್ಲಿ ಕೈಗೆ ಗ್ಲೌಸ್‌ಗಳನ್ನು ಧರಿಸಿ ಹಾಗೂ ಸ್ವಚ್ಛಗೊಳಿಸಿದ ತಕ್ಷಣ ಗ್ಲೌಸ್‌ಗಳನ್ನು ಬಿಸಾಡಿ. ಗ್ಲೌಸ್ ಇಲ್ಲದಿದ್ದಲ್ಲಿ ಶೂ ಸ್ವಚ್ಛಗೊಳಿಸುವ ಸಂದರ್ಭದಲ್ಲಿ ಬಾಯಿ, ಕಣ್ಣು ಅಥವಾ ಮೂಗನ್ನು ಮುಟ್ಟಿಕೊಳ್ಳದಂತೆ ಎಚ್ಚರ ವಹಿಸಿ. ನಂತರ ಕೈಗಳನ್ನು ಸ್ಯಾನಿಟೈಸ್ ಮಾಡಿಕೊಳ್ಳಿ.
ಹೊರಗಡೆ ಓಡಾಡಲೆಂದೇ ಒಂದು ಜೊತೆ ಶೂ ಎತ್ತಿಡಿ. ಅದನ್ನು ಮತ್ತೆಲ್ಲೂ ಬಳಸದಿರುವುದು ಉತ್ತಮ. ಮನೆಯೊಳಗೆ ಬರುವ ಮುಂಚೆ ಶೂ ತೆಗೆದಿಡಲು ಮರೆಯಬೇಡಿ. ಮನೆಯೊಳಗೆ ಬಂದ ತಕ್ಷಣ ಕಾಲು ತೊಳೆದು ಅಥವಾ ಸ್ಯಾನಿಟೈಸ್ ಮಾಡದೇ ಇರಲು ಮರೆಯದಿರಿ ಎಂಬ ಸಲಹೆಯನ್ನೂ ನೀಡಲಾಗಿದೆ.