ಜ್ವರ, ಶೀತ, ಕೆಮ್ಮು, ಆಯಾಸದ ಜೊತೆಗೆ ವಾಸನೆ ಹಾಗೂ ರುಚಿ ಕಳೆದುಕೊಳ್ಳುವುದು ಕೊರೊನಾದ ಪ್ರಮುಖ ಲಕ್ಷಣಗಳಲ್ಲಿ ಒಂದು. ವಾಸನೆ ಬರದೆ, ರುಚಿ ನಷ್ಟವಾಗ್ತಿದ್ದಂತೆ ಪರೀಕ್ಷೆ ಮಾಡಿಸಿಕೊಳ್ಳುವುದು ಒಳ್ಳೆಯದು. ಜೊತೆಗೆ ಪ್ರತ್ಯೇಕವಾಗಿರಿ. ಜ್ವರ, ನೆಗಡಿ ಕಡಿಮೆಯಾದ್ರೂ ಅನೇಕರಿಗೆ ಕೆಲ ದಿನ ವಾಸನೆ, ರುಚಿ ಬರುವುದಿಲ್ಲ. ಇದಕ್ಕೆ ಆತಂಕಪಡುವ ಅಗತ್ಯವಿಲ್ಲ. ಕೆಲವೊಂದು ಮನೆ ಮದ್ದಿನ ಮೂಲಕ ವಾಸನೆ, ರುಚಿ ಬರುವಂತೆ ಮಾಡಬಹುದು.
ರುಚಿ ಕಳೆದುಕೊಳ್ಳಲು ನಾಲಿಗೆ ಕಾರಣವಲ್ಲ. ಮೂಗಿನಲ್ಲಿರುವ ವಾಸನೆ ಕೋಶವನ್ನು ವೈರಸ್ ನಾಶಪಡಿಸುತ್ತದೆ. ಇದು ರುಚಿ ಮೇಲೂ ನೇರ ಪರಿಣಾಮ ಬೀರುತ್ತದೆ. ಕೊರೊನಾ ವೈರಸ್ ಸೋಂಕಿನಿಂದ ಚೇತರಿಸಿಕೊಂಡ ನಂತರ ದೀರ್ಘಕಾಲದವರೆಗೆ ವಾಸನೆ ಸಾಮರ್ಥ್ಯ ಹಿಂತಿರುಗುವುದಿಲ್ಲ.
ಅಜ್ವೈನ್ ಮೂಲಕ ನಿಮ್ಮ ವಾಸನೆಯನ್ನು ವಾಪಸ್ ಪಡೆಯಬಹುದು. ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುವ ಜೊತೆಗೆ ಶೀತದಿಂದ ರಕ್ಷಿಸಲು ಅಜ್ವೈನ್ ಸಹಕಾರಿ. ಕರವಸ್ತ್ರದಲ್ಲಿ ಅಜ್ವೈನ್ ಕಟ್ಟಿ, ಅದನ್ನು ಮೂಗಿಗೆ ಹಿಡಿಯುತ್ತಿರಬೇಕು. ಇದು ಶೀತ ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಮೂಗು, ಗಂಟಲು, ಎದೆಗೆ ಸಂಬಂಧಿಸಿದ ಸಮಸ್ಯೆಯನ್ನು ಕಡಿಮೆ ಮಾಡಲು ಪುದೀನಾ ನೆರವಾಗುತ್ತದೆ. ಬಾಯಿ ರುಚಿಗೂ ಇದು ಸಹಕಾರಿ. ಒಂದು ಕಪ್ ನೀರಿಗೆ 10-15 ಪುದೀನಾ ಎಲೆಗಳನ್ನು ಹಾಕಿ ಕುದಿಸಿ, ಜೇನು ತುಪ್ಪದಲ್ಲಿ ಅದನ್ನು ಬೆರೆಸಿ ದಿನಕ್ಕೆ ಎರಡು ಬಾರಿ ಕುಡಿಯುತ್ತ ಬಂದರೆ ಸಮಸ್ಯೆ ಕೆಲವೇ ದಿನಗಳಲ್ಲಿ ಕಡಿಮೆಯಾಗುತ್ತದೆ.
ಶುಂಠಿಯಲ್ಲಿ ಆಂಟಿವೈರಲ್ ಮತ್ತು ಆಂಟಿಬ್ಯಾಕ್ಟೀರಿಯಲ್ ಗುಣಗಳಿವೆ. ಇದು ಶೀತದಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಶುಂಠಿಯ ವಾಸನೆ ಬಲವಾಗಿರುತ್ತದೆ. ಇದು ಮುಚ್ಚಿದ ರಕ್ತನಾಳಗಳನ್ನು ಸಕ್ರಿಯಗೊಳಿಸುತ್ತದೆ. ಇದು ವಾಸನೆ ಮತ್ತು ರುಚಿಯ ಸಾಮರ್ಥ್ಯವನ್ನು ಮರಳಿ ತರುತ್ತದೆ.