ಭಾರತದಲ್ಲಿ ಬೆಳೆಯುವ ಅಕ್ಕಿ ಶ್ವಾಸಕೋಶದ ಹಾಗೂ ಸ್ತನ ಕ್ಯಾನ್ಸರ್ ಅನ್ನು ಗುಣಪಡಿಸುವ ಔಷಧೀಯ ಗುಣ ಹೊಂದಿದೆ ಎಂದು ಈ ಹಿಂದೆ ಸಂಶೋಧನೆಯೊಂದು ಬಹಿರಂಗಪಡಿಸಿತ್ತು.
ಹೆಚ್ಚಾಗಿ ಛತ್ತೀಸಗಢದಲ್ಲಿ ಬೆಳೆಯಲಾಗುವ ಲೈಚಾ, ಗೌತನ್ ಹಾಗೂ ಮಹಾರ್ಜಿ ಎಂಬ ಸಾಂಪ್ರದಾಯಕ ಅಕ್ಕಿಯಲ್ಲಿರುವ ಗುಣಗಳು ಬಹಳ ಪರಿಣಾಮಕಾರಿ ಎಂಬುದಾಗಿ ಇಂದಿರಾಗಾಂಧಿ ಕೃಷಿ ವಿಶ್ವವಿದ್ಯಾಲಯ ಹಾಗೂ ಬಾಬಾ ಆಟೋಮಿಕ್ ರೀಸರ್ಚ್ ಸೆಂಟರ್ ಸಂಶೋಧಕರು ಹೇಳಿದ್ದರು.
ಛತ್ತೀಸ್ ಗಢದ ಕೆಲ ಜಿಲ್ಲೆಗಳಲ್ಲಿ ಬೆಳೆಯುವ ಲೈಚಾ ಅಕ್ಕಿ ಚರ್ಮದ ಖಾಯಿಲೆಗಳನ್ನು ಗುಣಪಡಿಸಿದರೆ, ಗೌತನ್ ಹಾಗೂ ಮಹಾರ್ಜಿ ಅಕ್ಕಿ ಶ್ವಾಸಕೋಶ ಹಾಗೂ ಸ್ತನ ಕ್ಯಾನ್ಸರ್ ತಡೆಯುತ್ತದೆ ಎಂಬುದಾಗಿ ಅಧ್ಯಯನಕಾರರು ತಿಳಿಸಿದ್ದರು. ಆದರೆ ಈ ಕುರಿತು ಇನ್ನೂ ಹೆಚ್ಚಿನ ಅಧ್ಯಯನ ನಡೆದರೆ ಅನುಕೂಲವೆಂದು ಹೇಳಲಾಗುತ್ತಿದೆ.