ಆಹಾರ ಜೀರ್ಣವಾಗದೇ ಅಜೀರ್ಣದ ಸಮಸ್ಯೆಯಿಂದ ಹೊಟ್ಟೆನೋವು, ಹೊಟ್ಟೆ ಉಬ್ಬುವುದು ಮುಂತಾದ ಸಮಸ್ಯೆಗಳಿಗೆ ಮನೆಯಲ್ಲೇ ಸಿಗುವಂತಹ ಔಷಧ ಇಲ್ಲಿದೆ ನೋಡಿ.
ಸ್ವಲ್ಪ ನೀರಿಗೆ ಒಂದು ಚಮಚ ನಿಂಬೆ ರಸ ಹಾಕಿ ದಿನಕ್ಕೆ ಮೂರ್ನಾಲ್ಕು ಬಾರಿ ಕುಡಿಯಿರಿ.
ಅತೀ ಕಡಲೆಕಾಯಿ ತಿಂದು ಅಜೀರ್ಣವಾದರೆ ಕಡೆದು, ಬೆಣ್ಣೆ ತೆಗೆದ ಮಜ್ಜಿಗೆಯನ್ನು ಕುಡಿಯಬೇಕು.
ಪುದೀನಾ ಸೊಪ್ಪಿನ ಟೀ ತಯಾರಿಸಿ ಏಳು ಚಮಚೆಯಷ್ಟು ದಿನಕ್ಕೆ ಮೂರು ಬಾರಿ ಕುಡಿಯಬೇಕು.
ನೀರಿಗೆ ಒಂದು ನಿಂಬು ರಸ, ಚಿಟಿಕೆ ಅಡಿಗೆ ಸೋಡ ಬೆರೆಸಿ ಸೇವಿಸಬೇಕು.
ರಾತ್ರಿ ಮಲಗುವಾಗ ಸಿಪ್ಪೆ ಸಹಿತವಾದ ಯಾಲಕ್ಕಿಯೊಂದಿಗೆ ಬಾಳೆಹಣ್ಣನ್ನು ತಿನ್ನಿ.
ಶುಂಠಿಯನ್ನು ನೀರಿನಲ್ಲಿ ತೇಯ್ದು ಅದಕ್ಕೆ ಜೇನುತುಪ್ಪ ಬೆರೆಸಿ ಸೇವಿಸಿ.
ಹಸಿ ಮೂಲಂಗಿಗೆ ಕಾಳುಮೆಣಸಿನ ಪುಡಿ, ನಿಂಬೆರಸ, ಅಡಿಗೆ ಉಪ್ಪು ಸೇರಿಸಿ ತಿನ್ನಿ.
ಈರುಳ್ಳಿ ಅಥವಾ ಬೆಳ್ಳುಳ್ಳಿಯನ್ನು ಸುಟ್ಟು ತಿನ್ನುವುದರಿಂದ ಅಜೀರ್ಣ ನಿವಾರಣೆಯಾಗುವುದು.