ಕಣ್ಣು ಕುಕ್ಕುವ ಬಣ್ಣದ ಕ್ಯಾರೆಟ್ ನೋಡಿದ್ರೆ ಬಾಯಲ್ಲಿ ನೀರೂರುತ್ತೆ. ಆರೋಗ್ಯಕ್ಕೆ ಒಳ್ಳೆಯದು ಅಂತಾ ಅನೇಕರು ಇದನ್ನು ತಿನ್ನುವ ರೂಢಿ ಇಟ್ಟುಕೊಂಡಿದ್ದಾರೆ. ನೀವು ಪೌಷ್ಠಿಕ ಆಹಾರ ಅಂತ ಕ್ಯಾರೆಟ್ ತಿನ್ನುವ ಮುನ್ನ ಈ ಸುದ್ದಿಯನ್ನು ಓದಿ.
ಉದ್ದನೆಯ ಕೆಂಪು ಬಣ್ಣದ ಕ್ಯಾರೆಟ್ ನೋಡಿದ್ರೆ ಹೈಬ್ರೀಡ್ ಕ್ಯಾರೆಟ್ ಅಂತಾ ಜನ ಖರೀದಿಸ್ತಾರೆ. ಆದ್ರೆ ಆಮ್ಲದಲ್ಲಿ ಕ್ಯಾರೆಟ್ ತೊಳೆದು ಶೈನ್ ಬರುವಂತೆ ಮಾಡಿ ಕ್ಯಾರೆಟ್ ಮಾರಾಟ ಮಾಡಲಾಗ್ತಾ ಇದೆ ಎಂಬುದು ನಿಮ್ಮ ಗಮನದಲ್ಲಿರಲಿ. ಆಮ್ಲದಲ್ಲಿ ಕ್ಯಾರೆಟ್ ತೊಳೆದ್ರೆ ಅದರಲ್ಲಿ ಸಣ್ಣ ಸಣ್ಣ ತೂತುಗಳಾಗುತ್ತವೆ.
ಕುಂಬಳಕಾಯಿ, ಕ್ಯಾಪ್ಸಿಕಂ, ಮೂಲಂಗಿ ಇತ್ಯಾದಿ ತರಕಾರಿಗಳಲ್ಲೂ ಆಮ್ಲ ಇರುವ ಅಂಶ ಬೆಳಕಿಗೆ ಬಂದಿದೆ. ಹೀಗಾಗಿ ಬಣ್ಣ ನೋಡಿ ಖರೀದಿಸುವ ಮುನ್ನ ಒಮ್ಮೆ ಪರಿಶೀಲಿಸಿ.