ಪೇರಳೆ ಹಣ್ಣು ಯಾರಿಗೆ ಇಷ್ಟವಾಗೋದಿಲ್ಲ ಹೇಳಿ. ರುಚಿಯ ಜೊತೆಗೆ ಸಾಕಷ್ಟು ಔಷಧಿ ಗುಣಗಳು ಈ ಹಣ್ಣಿನಲ್ಲಿದೆ. ಒಂದು ಪೇರಳೆ ಹಣ್ಣು ಹತ್ತು ಸೇಬು ಹಣ್ಣಿಗೆ ಸಮ ಎನ್ನಲಾಗುತ್ತದೆ. ಆದ್ರೆ ಹಣ್ಣಿನ ದುಪ್ಪಟ್ಟು ಔಷಧಿ ಗುಣ ಪೇರಳೆ ಎಲೆಯಲ್ಲಿದೆ.
ಮುಖದ ಮೇಲೆ ಮೊಡವೆ ಕಾಣಿಸಿಕೊಂಡಿದ್ದರೆ ಚಿಂತೆ ಬೇಡ. ಪೇರಳೆ ಎಲೆ ಪೇಸ್ಟ್ ಮಾಡಿ ಮೊಡವೆಯಾದ ಜಾಗಕ್ಕೆ ಹಚ್ಚಿಕೊಳ್ಳಿ. ಎಲೆಯಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣವಿರುತ್ತದೆ. ಇದು ಮೊಡವೆಗಳನ್ನು ಹೋಗಲಾಡಿಸಲು ನೆರವಾಗುತ್ತದೆ.
ಪೇರಳೆ ಎಲೆಗಳು ಸುಕ್ಕನ್ನು ಹೊಡೆದೋಡಿಸುವ ಶಕ್ತಿ ಹೊಂದಿದೆ. ಎಲೆಗಳ ಪೇಸ್ಟ್ ಮಾಡಿ ಪ್ರತಿನಿತ್ಯ ಮುಖಕ್ಕೆ ಹಚ್ಚಿಕೊಳ್ಳಿ. ಕೆಲವೇ ದಿನಗಳಲ್ಲಿ ವ್ಯತ್ಯಾಸ ನಿಮಗೆ ಗೊತ್ತಾಗುತ್ತದೆ.
ಮುಖದ ಮೇಲೆ ಕಲೆಗಳಿದ್ದರೆ ಪೇರಳೆ ಎಲೆಗಳು ಪ್ರಯೋಜನಕಾರಿ. ಪೇರಳೆ ಎಲೆಗಳನ್ನು ನೀರಿನಲ್ಲಿ ಕುದಿಸಿ, ಅದರಿಂದ ದಿನಕ್ಕೆ ಎರಡು ಬಾರಿ ಮುಖ ತೊಳೆದ್ರೆ ಕಲೆ ಮಾಯವಾಗುತ್ತದೆ.
ಬಾಯಿಯಿಂದ ಕೆಟ್ಟ ವಾಸನೆ ಬರ್ತಾ ಇದ್ದರೆ ಪೇರಳೆ ಎಲೆಯನ್ನು ಜಗಿಯಿರಿ. ಕೆಲವೇ ದಿನಗಳಲ್ಲಿ ಬಾಯಿಯ ವಾಸನೆ ಇರುವುದಿಲ್ಲ.
ತಲೆಯಲ್ಲಿ ಹೇನುಗಳಾಗಿದ್ದರೆ ಪೇರಳೆ ಎಲೆಯ ರಸವನ್ನು ತಲೆಗೆ ಹಚ್ಚಿ ತೊಳೆಯಿರಿ.
ಕೂದಲು, ಎಣ್ಣೆ ಜಿಡ್ಡಿನಂತಾಗಿದ್ದರೂ ಪೇರಳೆ ಎಲೆಗಳನ್ನು ಬಳಸಬಹುದು. ಬಿಸಿ ನೀರಿಗೆ ಪೇರಳೆ ಎಲೆಗಳನ್ನು ಹಾಕಿ ಆ ನೀರಿನಲ್ಲಿ ಸ್ನಾನ ಮಾಡಬೇಕು.