ವಯಸ್ಸು ನಲ್ವತ್ತಾಯ್ತು ಅಂದ್ರೆ ಮಕ್ಕಳಾಗೋದು ಕಷ್ಟ ಅನ್ನೋ ಭಾವನೆ ಎಲ್ಲರಲ್ಲೂ ಇದೆ. ಅದರಲ್ಲೂ ಮಹಿಳೆಯರಿಗೆ ಮುಟ್ಟು ನಿಂತ ಮೇಲೆ ಮಗು ಆಗೋದು ತೀರಾ ಅಪರೂಪ. ಆದ್ರೆ ಸಂಶೋಧನೆ ಪ್ರಕಾರ 50 ವರ್ಷವಾದ್ಮೇಲೂ ಮಹಿಳೆ ಸಹಜವಾಗಿಯೇ ಗರ್ಭ ಧರಿಸಬಹುದಾಗಿದೆ.
ಓವರಿಯನ್ ಟಿಶ್ಯೂ ಫ್ರೀಝ್ ಮಾಡಿ ಇಡುವುದರಿಂದ ಮಹಿಳೆ ಗರ್ಭ ಧರಿಸುವುದು ಸುಲಭವಾಗಲಿದೆ. ಇದರಿಂದ ಮೋನೋಪಾಸ್ ರಿವರ್ಸ್ ಆಗುತ್ತದೆ ಎನ್ನುತ್ತಾರೆ ವೈದ್ಯರು. 40-50 ವರ್ಷದ ಮಹಿಳೆ ಓವರಿಯನ್ ಫ್ರೀಝ್ ಮಾಡೋದ್ರಿಂದ ಗರ್ಭಿಣಿಯಾಗಬಹುದು ಜೊತೆಗೆ ಮೋನೋಪಾಸ್ ಅನ್ನು ಮುಂದಕ್ಕೆ ಹಾಕಿ, ಫರ್ಟಿಲಿಟಿ ವಾಪಸ್ ಪಡೆಯಬಹುದು.
ಈ ಪ್ರಕ್ರಿಯೆಯಲ್ಲಿ ಓವರಿಯನ್ ಟಿಶ್ಯೂಗಳನ್ನು ತೆಗೆದು ಸಂಗ್ರಹಿಸಲಾಗುತ್ತದೆ. ನಂತರ ಇದನ್ನು ಪ್ರಯೋಗಕ್ಕೆ ಒಳಪಡಿಸಲಾಗುತ್ತದೆ. 10 ಮಹಿಳೆಯರ ಪೈಕಿ ನಾಲ್ವರಲ್ಲಿ ಈ ಪ್ರಯೋಗ ಯಶಸ್ವಿಯಾಗಿದೆ. 1999ರಲ್ಲಿ ಮೊದಲ ಬಾರಿಗೆ ಈ ಪ್ರಯೋಗ ನಡೆಸಲಾಗಿತ್ತು.
ಓವರಿಯನ್ ಟಿಶ್ಯೂಗಳನ್ನು ಫ್ರೀಝ್ ಮಾಡೋದು ಎಗ್ ಫ್ರೀಝಿಂಗ್ ಗಿಂತ್ಲೂ ಲಾಭದಾಯಕ ಅನ್ನೋದು ವಿಜ್ಞಾನಿಗಳ ಅಭಿಪ್ರಾಯ. ಯಾಕಂದ್ರೆ ಮೋನೋಪಾಸ್ ಅನ್ನೇ ಇದು ರಿವರ್ಸ್ ಮಾಡೋದ್ರಿಂದ ಫರ್ಟಿಲಿಟಿಯನ್ನು ಕೂಡ ವಾಪಸ್ ತರಬಹುದು. ಇದರಿಂದ ಮಹಿಳೆ ಸಹಜವಾಗಿ ಗರ್ಭ ಧರಿಸಬಹುದಾದ ಸಾಧ್ಯತೆಗಳು ಹೆಚ್ಚಾಗಿರುತ್ತವೆ.