ಬೇಸಿಗೆ ಶುರುವಾಗಿದೆ. ಮಾವಿನ ಹಣ್ಣಿನ ಸೀಸನ್ ಕೂಡಾ ಬಂದಿದೆ. ಹಣ್ಣುಗಳ ರಾಜ ಅಂತಾನೇ ಕರೆಯಲ್ಪಡುವ ಮಾವಿನ ರುಚಿಗೆ ಮಾರುಹೋಗದವರಿಲ್ಲ. ಆದ್ರೆ ಇದೂವರೆಗೂ ಮಾವಿನ ಹಣ್ಣು ತಿಂದ್ರೆ ತೂಕ ಹೆಚ್ಚಾಗುತ್ತೆ ಅಂತಾ, ಕೆಲವರು ಈ ಹಣ್ಣಿನಿಂದ ದೂರ ಇರುತ್ತಿದ್ರು. ಆದ್ರೆ ಇನ್ನ್ಮುಂದೆ ನಿಮಗಿಷ್ಟದ ಮಾವಿನ ಹಣ್ಣನ್ನು ಎಷ್ಟು ಬೇಕಾದ್ರೂ ತಿನ್ನಿ.
ಮಾವಿನ ಹಣ್ಣಿನಿಂದ ಆರೋಗ್ಯಕ್ಕೆ ತುಂಬಾ ಅನುಕೂಲಗಳಿವೆ. ಮಾವಿನ ಹಣ್ಣಿನಲ್ಲಿ ಯಾವುದೇ ಕೊಬ್ಬಿನಂಶ ಇರುವುದಿಲ್ಲ ಜೊತೆಗೆ ಈ ಹಣ್ಣಿನಲ್ಲಿ ಫೈಬರ್ ಇರುವುದರಿಂದ ಜೀರ್ಣಕ್ರಿಯೆಗೆ ಒಳ್ಳೆಯದು. ಜೊತೆಗೆ ಕರುಳಿನ ಆರೋಗ್ಯವನ್ನು ವೃದ್ಧಿಸುತ್ತದೆ. ಅಲ್ಲದೆ ಮಾವಿನಲ್ಲಿ ಪೆಕ್ಟಿನ್ ಎಂಬ ಅಂಶ ಇರುವುದರಿಂದ ದೇಹದಲ್ಲಿರುವ ಬೇಡವಾದ ಕೊಲೆಸ್ಟ್ರಾಲ್ ವಿರುದ್ಧ ಹೋರಾಡಲಿದೆ. ಹಾಗೆಯೇ ಮಾವಿನಹಣ್ಣಿನಲ್ಲಿ ವಿಟಮಿನ್ ಸಿ ಇದ್ದು, ಇದನ್ನ ಸೇವಿಸುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.
ದೇಹದ ತೂಕ ಕಡಿಮೆ ಮಾಡಿಕೊಳ್ಳಲು ಮಾವಿನಹಣ್ಣನ್ನು ನಿಮ್ಮ ಡಯೆಟ್ ನಲ್ಲಿ ಹೀಗೆ ಉಪಯೋಗಿಸಿ
ಕಚ್ಚಾ ಮಾವಿನ ತಿರುಳನ್ನು 100 ಗ್ರಾಂನಷ್ಟು ಸೇವಿಸಿ, ಇದು ಕೇವಲ 60 ಕ್ಯಾಲೋರಿಗಳನ್ನ ಹೊಂದಿರುತ್ತೆ.
ಮಾವಿನ ಹಣ್ಣಿನ ಸೀಕರಣೆ ಮಾಡಿ ಮಧ್ಯಾಹ್ನ ಊಟದೊಂದಿಗೆ ಸೇವಿಸಬೇಡಿ. ಕಾರಣ ಅದಕ್ಕೆ ಸಕ್ಕರೆ ಸೇರಿಸುವುದರಿಂದ ಕ್ಯಾಲೊರಿಸ್ ಅಧಿಕವಾಗಿ, ದೇಹದಲ್ಲಿ ಕೊಬ್ಬು ಹೆಚ್ಚಾಗಲು ಕಾರಣವಾಗುತ್ತೆ.
ಸಂಜೆಯ ಸ್ನ್ಯಾಕ್ಸ್ ಆಗಿ ಮಾವಿನ ಹಣ್ಣನ್ನು ಉಪಯೋಗಿಸುವುದರಿಂದ ಆರೋಗ್ಯಕ್ಕೂ ಉತ್ತಮ, ತೂಕ ಇಳಿಸಲೂ ಸಹಕಾರಿಯಾಗಲಿದೆ.
ಪ್ಯಾಕೆಟ್ ಗಳಲ್ಲಿ ಸಿಗುವ ಮಾವಿನ ಉತ್ಪನ್ನಗಳನ್ನು ಖರೀದಿಸಬೇಡಿ. ಇದರಲ್ಲಿ ಅತಿ ಹೆಚ್ಚು ಸಕ್ಕರೆ ಅಂಶ ಇರುತ್ತದೆ.
ಮಾವಿನ ಹಣ್ಣು ಸೇವಿಸುವಾಗ ಯಾವುದೇ ಸಿಹಿಕಾರಕಗಳನ್ನು ಸೇರಿಸದಿರಿ
ಮಾವಿನ ಹಣ್ಣನ್ನ ಜ್ಯೂಸ್ ಮಾಡಿ ಸೇವಿಸುವುದರ ಬದಲು ಹಣ್ಣನ್ನು ಹಾಗೆಯೇ ಕಚ್ಚಿ ತಿಂದರೆ ಉತ್ತಮ.
ಸಿಪ್ಪೆ ಸಮೇತ ಮಾವಿನ ಹಣ್ಣು ತಿಂದರೆ ಒಳ್ಳೆಯದು. ಸಿಪ್ಪೆಯಲ್ಲಿ ಪೈಟೋ ಕೆಮಿಕಲ್ ಅಂಶ ಇರುವುದರಿಂದ ದೇಹದಲ್ಲಿ ಕೊಬ್ಬು ಹೆಚ್ಚಾಗುವುದನ್ನು ತಡೆಯುತ್ತದೆ ಅಂತಾ ಸಂಶೋಧನೆಯಿಂದ ತಿಳಿದು ಬಂದಿದೆ.
ಒಟ್ನಲ್ಲಿ ಮಾವು ತಿಂದ್ರೆ ದಪ್ಪ ಆಗ್ತಿವಿ ಅನ್ನೋ ಚಿಂತೆ ಬಿಡಿ, ರಸಭರಿತ ಹಣ್ಣು ತಿಂದು ತೂಕ ಇಳಿಸಿಕೊಳ್ಳಿ.