ಕಿಡ್ನಿ ಕಲ್ಲು ಸಮಸ್ಯೆಯಿಂದ ಬಳಲುತ್ತಿರುವವರು ಅತಿಯಾದ ಹೊಟ್ಟೆ ನೋವು, ಉರಿ ಮೂತ್ರ ತೊಂದರೆ ಅನುಭವಿಸುತ್ತಾರೆ. ಈ ಸಮಸ್ಯೆಯಿಂದ ಕೊಂಚ ಪಾರಾಗಲು ಕೆಲ ಆಹಾರಗಳನ್ನು ಸೇವಿಸಬಾರದು. ಆ ಆಹಾರಗಳ ವಿವರ ಇಲ್ಲಿದೆ.
ಉಪ್ಪು
ಉಪ್ಪು ಹೆಚ್ಚು ಸೇವಿಸಿದರೆ ನಮ್ಮ ದೇಹದಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಸೋಡಿಯಂ ಉತ್ಪತ್ತಿಯಾಗುತ್ತದೆ. ಇದು ಕಿಡ್ನಿ ಕಲ್ಲಿಗೆ ಕಾರಣವಾಗಬಹುದು.
ಕ್ಯಾಲ್ಶಿಯಂ
ಕಿಡ್ನಿ ಕಲ್ಲು ಎನ್ನುವುದು ಕ್ಯಾಲ್ಶಿಯಂ ಪ್ರಮಾಣ ಹೆಚ್ಚುವುದರಿಂದಲೂ ಬರಬಹುದು. ಅಧಿಕ ಪ್ರಮಾಣದ ಕ್ಯಾಲ್ಶಿಯಂ ಇರುವ ಆಹಾರ ಸೇವಿಸಿದರೆ ಅದು ಕಿಡ್ನಿ ಕಲ್ಲಾಗಿ ಪರಿವರ್ತನೆಯಾಗಬಹುದು.
ಹುಳಿ
ಅಧಿಕ ಆಮ್ಲೀಯ ಪದಾರ್ಥದ ಸೇವನೆಯೂ ಒಳ್ಳೆಯದಲ್ಲ. ಸ್ಟ್ರಾಬೆರಿ, ಚಹಾ, ಒಣಹಣ್ಣುಗಳು, ಪಾಲಕ್ ಸೊಪ್ಪು ಹೆಚ್ಚು ಸೇವಿಸದಿರಿ.
ಸಕ್ಕರೆ
ಸಕ್ಕರೆ ತಿಂದರೆ ಹಲವು ಸಮಸ್ಯೆಗಳಿಗೆ ದಾರಿ ಮಾಡಿಕೊಟ್ಟಂತಾಗುತ್ತದೆ. ಸಕ್ಕರೆಯಲ್ಲಿರುವ ಕ್ಯಾಲ್ಶಿಯಂ ಅಂಶ ಕೂಡಾ ಕಿಡ್ನಿ ಕಲ್ಲಿಗೆ ಕಾರಣವಾಗುತ್ತದೆ.