
ಉಪ್ಪಿನಕಾಯಿ ನೆಕ್ಕೋಕೆ ನಾಲಿಗೆ ಚಡಪಡಿಸ್ತಾ ಇದೆ ಅಂತೀವಿ. ವಿಷ್ಯ ಏನು ಅಂದರೆ ಬಯಸೋದು ನಾಲಿಗೆಯಲ್ಲ. ನಮ್ಮ ಶರೀರ. ನಮ್ಮ ಶರೀರದಲ್ಲಿ ಯಾವುದಾದರೊಂದು ಅಂಶ ಕಡಿಮೆ ಇದ್ದಾಗ, ಅದನ್ನು ತಮ್ಮ ದೇಹ ಈ ರೀತಿ ತಿಳಿಸುತ್ತಂತೆ. ಸಂಶೋಧಕರು, ನಮ್ಮ ದೇಹದಲ್ಲಿ ಯಾವ ಅಂಶ ಕಡಿಮೆ ಇದ್ದಾಗ, ಯಾವ ತಿಂಡಿ ತಿನ್ನಬೇಕೆನ್ನಿಸುತ್ತದೆ ಎಂಬುದನ್ನು ತಿಳಿಸಿದ್ದಾರೆ.
ಸಿಹಿ ತಿನ್ನಲು ನಿಮ್ಮ ಶರೀರ ಬಯಸಿದರೆ, ನಿಮ್ಮ ದೇಹದಲ್ಲಿ ಕ್ರೋಮಿಯಂ ಅಂಶ ಕಡಿಮೆಯಿದೆ ಎಂದು ಅರ್ಥ.
ಚಾಕೋಲೆಟ್ ತಿನ್ನುವ ಬಯಕೆ ಶುರುವಾದರೆ, ಮೆಗ್ನೀಷಿಯಂ ಪ್ರಮಾಣ ಕಡಿಮೆಯಾಗಿದೆ ಎಂದು ನೀವು ಅರ್ಥ ಮಾಡಿಕೊಳ್ಳಿ.
ಉಪ್ಪು ಅಥವಾ ಉಪ್ಪಿನಂಶದ ತಿಂಡಿ ಬಯಸಿದರೆ ಸೋಡಿಯಂ ಕಡಿಮೆಯಾಗಿದೆ ಎಂಬುದು ಸ್ಪಷ್ಟ.
ಕಬ್ಬಿಣದ ಅಂಶ ಕಡಿಮೆ ಇದ್ದರೆ ನಾಲಿಗೆ ಮಾಂಸದ ಆಹಾರ ಸೇವಿಸಲು ಇಚ್ಛಿಸುತ್ತದೆ.
ಮಸಾಲೆಯುಕ್ತ ಪದಾರ್ಥ ತಿನ್ನುವಂತಾದರೆ, ನಿಮ್ಮ ಹೊಟ್ಟೆಯಲ್ಲೇನೋ ಸಮಸ್ಯೆ ಇದೆ ಎಂದು ಅರ್ಥ ಮಾಡಿಕೊಳ್ಳಿ.