ಆಧುನಿಕ ಜೀವನ ಶೈಲಿ, ಆಹಾರ ಪದಾರ್ಥಗಳು, ಕೆಲಸದ ಒತ್ತಡ, ಕೆಲಸ ಮಾಡುವ ಸ್ಥಳ, ಕುಟುಂಬ ನಿರ್ವಹಣೆ ಇವೇ ಮೊದಲಾದವುಗಳಿಂದ ಹರೆಯದಲ್ಲೇ ಕೆಲವರು ಲೈಂಗಿಕಾಸಕ್ತಿಯನ್ನು ಕಳೆದುಕೊಳ್ಳುತ್ತಾರೆ.
ಸಂಗಾತಿಯೊಂದಿಗಿನ ಸಂಬಂಧ ಕೂಡ ಇದರ ಮೇಲೆ ಪರಿಣಾಮ ಬೀರುತ್ತದೆ. ಕೆಲವೊಮ್ಮೆ ಏನೂ ಬೇಡವೆನಿಸುತ್ತದೆ. ಕಾಲ ಬದಲಾದಂತೆ ಜೀವನ ಶೈಲಿಯೂ ಬದಲಾಗಿದೆ. ಒತ್ತಡದಿಂದ ಎಲ್ಲದರ ಬಗ್ಗೆಯೂ ಹೆಚ್ಚಿನವರು ಆಸಕ್ತಿ ಕಳೆದುಕೊಳ್ಳುತ್ತಾರೆ.
ಮಹಿಳೆಯರು ಆಹಾರ, ಒತ್ತಡ, ಹಾರ್ಮೊನ್ ಸಮಸ್ಯೆ ಸೇರಿ ಹಲವು ಕಾರಣಗಳಿಂದ ಲೈಂಗಿಕಾಸಕ್ತಿ ಕಳೆದುಕೊಳ್ಳುತ್ತಾರೆ. ಹಾಗಾಗಿಯೇ ಹಿಂದೆಲ್ಲಾ ನವದಂಪತಿಗೆ ಉತ್ತುತ್ತಿ ಕಾರ, ತುಪ್ಪ ಮೊದಲಾದವುಗಳನ್ನು ಶಕ್ತಿವರ್ಧಕವಾಗಿ ನೀಡಲಾಗುತ್ತಿತ್ತು.
ಆಸಕ್ತಿ ಕಳೆದುಕೊಂಡವರಿಗಾಗಿ ಸೆಕ್ಸ್ ಬಯಕೆಯನ್ನು ಹೆಚ್ಚಿಸುವ, ವಯಾಗ್ರದಂತೆ ಕೆಲಸ ಮಾಡುವ ಆಹಾರಗಳು ಇಲ್ಲಿವೆ. ಅವೆಂದರೆ, ಪಾಲಾಕ್ ಸೊಪ್ಪು, ಮೀನಿನ ಖಾದ್ಯ, ಡಾರ್ಕ್ ಚಾಕೊಲೆಟ್, ಅಶ್ವಗಂಧ, ಶತಾವರಿ ಬೇರು ಮೊದಲಾದವು. ಇವುಗಳೊಂದಿಗೆ ರೆಡ್ ವೈನ್ ಕೂಡ ಮಹಿಳೆಯರಲ್ಲಿ ಲೈಂಗಿಕಾಸಕ್ತಿಯನ್ನು ಹೆಚ್ಚಿಸುತ್ತವೆ ಎನ್ನಲಾಗಿದೆ.
ಇದೆಲ್ಲಕ್ಕಿಂತ ಮಿಗಿಲಾಗಿ ಸೆಕ್ಸ್ ಎನ್ನುವುದು ಸಮಯ, ಸಂದರ್ಭ ಆಸಕ್ತಿಯನ್ನು ಅವಲಂಬಿಸಿರುತ್ತದೆ ಎನ್ನುತ್ತಾರೆ ಕೆಲವರು.