alex Certify ನವರಾತ್ರಿ ಉಪವಾಸದಲ್ಲಿ ಹೀಗಿರಲಿ ನಿಮ್ಮ ʼಆಹಾರʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನವರಾತ್ರಿ ಉಪವಾಸದಲ್ಲಿ ಹೀಗಿರಲಿ ನಿಮ್ಮ ʼಆಹಾರʼ

ದೇಶದೆಲ್ಲೆಡೆ ನವರಾತ್ರಿ ವೈಭವ ಮನೆ ಮಾಡಿದೆ. ನವರಾತ್ರಿ ಹಿನ್ನೆಲೆಯಲ್ಲಿ ತಾಯಿ ದುರ್ಗೆಯ ಭಕ್ತರು ಸತತ 9 ದಿನಗಳ ಕಾಲ ಉಪವಾಸ ಮಾಡ್ತಾರೆ. ಕೆಲವರು ತೂಕವನ್ನು ಇಳಿಸಿಕೊಳ್ಳುವ ಉದ್ದೇಶದಿಂದಲೂ ಉಪವಾಸ ವೃತ ಮಾಡ್ತಾರೆ.

ಕೆಲವರಿಗೆ ಉಪವಾಸ ಇರೋದ್ರಿಂದ ವಾಂತಿ, ತಲೆಸುತ್ತು ಕಾಣಿಸಿಕೊಳ್ಳುತ್ತದೆ. ಈ ವೇಳೆ ನಾವು ತಿನ್ನುವ ಆಹಾರ ಕೂಡ ನಮ್ಮ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ. ನವರಾತ್ರಿ ಸಂದರ್ಭದಲ್ಲಿ ಕೆಲವೊಂದು ಆಹಾರಗಳನ್ನು ಅಪ್ಪಿ-ತಪ್ಪಿಯೂ ಸೇವಿಸಬಾರದು.

ಸಕ್ಕರೆ : ಈ ಒಂಭತ್ತು ದಿನಗಳ ಕಾಲ ಸಕ್ಕರೆಯನ್ನು ಅಪ್ಪಿತಪ್ಪಿಯೂ ಸೇವನೆ ಮಾಡಬೇಡಿ. ಇದ್ರಿಂದ ನಿಮ್ಮ ತೂಕ ಕಡಿಮೆಯಾಗುತ್ತೆ. ಜೊತೆಗೆ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಆಲೂಗಡ್ಡೆ : ನವರಾತ್ರಿ ಸಂದರ್ಭದಲ್ಲಿ ಆಲೂಗಡ್ಡೆಗೆ ಗುಡ್ ಬೈ ಹೇಳಿ. ಟೀ ಜೊತೆ ಆಲೂ ಪಕೋಡಾ ತಿನ್ನುತ್ತಿದ್ದರೆ ನಿಮ್ಮ ತೂಕ ಕಡಿಮೆಯಾಗುವ ಬದಲು ಹೆಚ್ಚಾಗುತ್ತದೆ. ಆಲೂಗಡ್ಡೆ ಬದಲು ನೀವು ಬಾಳೆಹಣ್ಣು ತಿನ್ನಿ.

ರಾಜ್ಗಿರಿ : ನವರಾತ್ರಿಯಲ್ಲಿ ಮೈದಾ, ಗೋಧಿ ಹಿಟ್ಟಿನ ಬದಲು ರಾಜ್ಗಿರಾ ಹಿಟ್ಟನ್ನು ಉಪಯೋಗಿಸಿ. ಇದ್ರಲ್ಲಿ ಕಡಿಮೆ ಕ್ಯಾಲೋರಿ ಇರುವ ಜೊತೆಗೆ ಹೆಚ್ಚು ನ್ಯೂಟ್ರಿಶಿಯನ್ ಅಂಶ ಹೊಂದಿರುತ್ತದೆ.

ಕರಿದ ತಿಂಡಿ : ನವರಾತ್ರಿ ಉಪವಾಸದಲ್ಲಿ ಕರಿದ ತಿಂಡಿಗಳಿಂದ ದೂರವಿರಿ. ಬಜ್ಜಿ, ವಡಾ ಸೇರಿದಂತೆ ಕರಿದ ತಿಂಡಿಗಳ ಸಹವಾಸ ಬೇಡ.

ನೀರು : ನೀರು ಆರೋಗ್ಯಕ್ಕೆ ಬಹಳ ಒಳ್ಳೆಯದು. ಉಪವಾಸವಿರುವ ಕಾರಣ ಈ ದಿನಗಳಲ್ಲಿ ನೀವು ದಿನನಿತ್ಯಕ್ಕಿಂತ ಹೆಚ್ಚು ನೀರನ್ನು ಕುಡಿಯಬೇಕು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...