ಸಾಮಾನ್ಯವಾಗಿ ಯಾವುದೇ ರೋಗ ಗುಣಮುಖವಾದ ಮೇಲೆ ಚಿಂತಿಸುವ ಅಗತ್ಯವಿರುವುದಿಲ್ಲ. ಆದ್ರೆ ಕೊರೊನಾ ವೈರಸ್ ದೇಹದಿಂದ ಹೊರ ಹೋದ ನಂತ್ರವೂ ವೈರಸ್ ನ ಅಡ್ಡಪರಿಣಾಮಗಳು ದೇಹದಲ್ಲಿ ದೀರ್ಘಕಾಲದವರೆಗೆ ಇರುತ್ತದೆ. ಈ ವೈರಸ್ ದೇಹದ ಅನೇಕ ಪ್ರಮುಖ ಅಂಗಗಳನ್ನು ಹಾನಿಗೊಳಿಸುತ್ತದೆ. ಇತ್ತೀಚೆಗೆ ಕೊರೊನಾ ವೈರಸ್‌ನಿಂದ ಚೇತರಿಸಿಕೊಂಡಿದ್ದರೆ ದೇಹಕ್ಕೆ ವೈರಸ್ ಎಷ್ಟು ಹಾನಿ ಮಾಡಿದೆ ಎಂಬುದನ್ನು ಪರೀಕ್ಷಿಸಿಕೊಳ್ಳುವ ಅಗತ್ಯವಿದೆ.
ಕೋವಿಡ್ -19 ಸೋಂಕಿನಿಂದಾಗಿ ದೇಹದಲ್ಲಿ ಸಾಕಷ್ಟು ಉರಿಯೂತ ಉಂಟಾಗುತ್ತದೆ. ಇದರಿಂದಾಗಿ ಹೃದಯದ ಸ್ನಾಯುಗಳು ದುರ್ಬಲಗೊಳ್ಳುತ್ತವೆ. ಕೋವಿಡ್ ನಿಂದ ಚೇತರಿಸಿಕೊಳ್ಳುವ ಅನೇಕ ರೋಗಿಗಳಲ್ಲಿ ಅಸಹಜ ಹೃದಯ ಬಡಿತದ ಸಮಸ್ಯೆಯೂ ಕಂಡುಬರುತ್ತದೆ. ಹಾಗಾಗಿ ಚೇತರಿಕೆಯ ನಂತರ ಕಾರ್ಡಿಯಾಕ್ ಸ್ಕ್ರೀನಿಂಗ್ ಪರೀಕ್ಷೆ ಮಾಡಿಕೊಳ್ಳಬೇಕು.
ಕೋವಿಡ್ -19 ರೋಗ ಎಷ್ಟು ತೀವ್ರವಾಗಿದೆ ಎಂಬುದನ್ನು ನಿರ್ಧರಿಸಲು ಎದೆಯ ಸಿಟಿ ಸ್ಕ್ಯಾನ್ ಸಾಕಷ್ಟು ಸಹಾಯ ಮಾಡುತ್ತದೆ. ಎದೆಯ ಸಿಟಿ ಸ್ಕ್ಯಾನ್ ಮತ್ತು ಶ್ವಾಸಕೋಶದ ಕಾರ್ಯ ಪರೀಕ್ಷೆಯು ರೋಗಿಯ ಚೇತರಿಕೆ ಹೇಗೆ ನಡೆಯುತ್ತಿದೆ ಎಂಬುದನ್ನು ಕಂಡುಹಿಡಿಯಲು ಸಹ ಸಹಾಯ ಮಾಡುತ್ತದೆ.
ಕೊರೊನಾದಿಂದ ರಕ್ಷಣೆ ಬೇಕಾದಲ್ಲಿ ಈ ಹಣ್ಣುಗಳ ಸೇವನೆ ಶುರು ಮಾಡಿ
ಕೊರೊನಾ ವೈರಸ್ ಸೋಂಕಿನಿಂದ ಚೇತರಿಸಿಕೊಂಡ ನಂತರವೂ ಅನೇಕ ರೋಗಿಗಳು ಹಲವಾರು ವಾರಗಳು ಮತ್ತು ತಿಂಗಳುಗಳವರೆಗೆ ನರವೈಜ್ಞಾನಿಕ ಮತ್ತು ಮನೋವೈದ್ಯಕೀಯ ಲಕ್ಷಣಗಳನ್ನು ಹೊಂದಿರುತ್ತಾರೆ. ಸೋಂಕಿನಿಂದ ಚೇತರಿಸಿಕೊಂಡ ನಂತರ ಮೆದುಳು ಮತ್ತು ನ್ಯೂರೋ ಫಂಕ್ಷನ್ ಪರೀಕ್ಷೆಯನ್ನು ನಡೆಸುವುದು ಅಗತ್ಯವಾಗಿರುತ್ತದೆ. ಇದರಿಂದಾಗಿ ರೋಗಿಯಲ್ಲಿ ಮೆದುಳಿನ ಮಂಜು, ಆತಂಕ, ಅತಿಯಾದ ಆಯಾಸ, ತಲೆತಿರುಗುವಿಕೆ ಮುಂತಾದ ಲಕ್ಷಣಗಳು ಕಂಡುಬರುತ್ತವೆ.
ಕೊರೊನಾ ವೈರಸ್ ನಂತ್ರ ಮಧುಮೇಹದ ಸಮಸ್ಯೆ ಅನೇಕರನ್ನು ಕಾಡುತ್ತಿದೆ. ಕೋವಿಡ್ -19 ನಿಂದ ಚೇತರಿಸಿಕೊಂಡ ನಂತರ ಗ್ಲೂಕೋಸ್ ಪರೀಕ್ಷೆ ಮಾಡಿಸಿಕೊಳ್ಳಬೇಕಾದ ಅಗತ್ಯವಿದೆ.
ಕೊರೊನಾ ಸೋಂಕಿನ ವಿರುದ್ಧ ಹೋರಾಡಿದ ನಂತರ ದೇಹದಲ್ಲಿ ಪ್ರತಿಕಾಯ ತಯಾರಾಗುತ್ತದೆ. ಇದು ಭವಿಷ್ಯದಲ್ಲಿ ಸೋಂಕನ್ನು ತಡೆಯಲು ಸಹಾಯ ಮಾಡುತ್ತದೆ. ಚೇತರಿಕೆಯ ನಂತರ ಆಂಟಿಬಾಡಿ ಪರೀಕ್ಷೆಯನ್ನು ಸಹ ಮಾಡಿಸಿಕೊಳ್ಳಬೇಕು. ಇದ್ರಿಂದ ರೋಗನಿರೋಧಕ ರಕ್ಷಣೆಯ ಮಟ್ಟ ಎಷ್ಟು ಎಂದು ತಿಳಿಯಬಹುದು.