ಕಪ್ಪು ಮೆಣಸು ಮಸಾಲೆಗಳಲ್ಲಿ ಜನಪ್ರಿಯತೆ ಪಡೆದಿದೆ. ವಿವಿಧ ಅಡುಗೆಗೆ ಇದನ್ನು ಬಳಸಲಾಗುತ್ತದೆ. ಪೌಷ್ಟಿಕ ಅಂಶಗಳಿಂದ ತುಂಬಿರುವುದರಿಂದ ಇದು ನಮ್ಮ ಆರೋಗ್ಯಕ್ಕೂ ಪ್ರಯೋಜನಕಾರಿ.
ಶೀತ, ಕೆಮ್ಮಿನಿಂದ ಬಳಲುತ್ತಿರುವ ಜನರಿಗೆ ಕರಿಮೆಣಸು ಅತ್ಯುತ್ತಮ ಔಷಧಿಯಾಗಿದೆ. ಆಯುರ್ವೇದದಲ್ಲೂ ಶೀತ ಮತ್ತು ಕೆಮ್ಮಿನ ಸಮಸ್ಯೆಗಳನ್ನು ಗುಣಪಡಿಸಲು ಇದನ್ನು ಬಳಸಲಾಗುತ್ತದೆ. ಜೇನುತುಪ್ಪದೊಂದಿಗೆ ಕರಿಮೆಣಸಿನ ಪುಡಿಯನ್ನು ಸೇವಿಸುವುದ್ರಿಂದ ಕೆಮ್ಮು, ಶೀತ ಕಡಿಮೆಯಾಗುತ್ತದೆ.
ಕೊರೊನಾ ವೈರಸ್ ಸಾಂಕ್ರಾಮಿಕವನ್ನು ತಪ್ಪಿಸಲು ರೋಗ ನಿರೋಧಕ ಶಕ್ತಿ ಬಲವಾಗಿರಬೇಕು. ಈ ಸಂದರ್ಭದಲ್ಲಿ ಕಷಾಯವನ್ನು ಕುಡಿಯಲು ಕೇಳಲಾಗುತ್ತಿದೆ. ಕೊರೊನಾ ವೈರಸ್ ರೋಗ ಲಕ್ಷಣಗಳನ್ನು ಗುಣಪಡಿಸಲು ಮತ್ತು ರೋಗ ನಿರೋಧಕ ಶಕ್ತಿಯನ್ನು ಬಲಪಡಿಸಲು ಈ ಕಷಾಯ ಬಹಳ ಪರಿಣಾಮಕಾರಿ ಎಂದು ನಂಬಲಾಗಿದೆ
ಕರಿಮೆಣಸು ಕೊಲೆಸ್ಟ್ರಾಲ್ ಮಟ್ಟವನ್ನು ಸಮತೋಲನಗೊಳಿಸುತ್ತದೆ. ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ. ಕರಿಮೆಣಸಿನ ಪುಡಿಯನ್ನು ಬಿಸಿ ನೀರಿನಲ್ಲಿ ಕುದಿಸಿ ಜೇನುತುಪ್ಪದೊಂದಿಗೆ ಕುಡಿಯಬಹುದು.
ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ಮಧುಮೇಹದ ಅಪಾಯವನ್ನು ಕಡಿಮೆ ಮಾಡುವುದು. ಕರಿಮೆಣಸನ್ನು ನಿಯಮಿತವಾಗಿ ಸೇವಿಸಿದರೆ, ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಮತೋಲನದಲ್ಲಿಟ್ಟುಕೊಳ್ಳುವ ಮೂಲಕ ಮಧುಮೇಹದ ಅಪಾಯವನ್ನು ಬಹಳ ಮಟ್ಟಿಗೆ ಕಡಿಮೆ ಮಾಡುತ್ತದೆ.
ಉರಿಯೂತವನ್ನು ಇದು ಕಡಿಮೆ ಮಾಡುತ್ತದೆ. ಇದು ತುಂಬಾ ಪ್ರಯೋಜನಕಾರಿಯಾಗಿದೆ. ಸಂಧಿವಾತದ ಸಮಸ್ಯೆ ಇರುವವರು ಮುಖ್ಯವಾಗಿ ಕರಿಮೆಣಸು ಸೇವಿಸಬೇಕು.