alex Certify ಕೊರೊನಾ ಲಸಿಕೆ ನಂತ್ರ ಡಯಟ್ ನಲ್ಲಿರಲಿ ಈ ಆಹಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಲಸಿಕೆ ನಂತ್ರ ಡಯಟ್ ನಲ್ಲಿರಲಿ ಈ ಆಹಾರ

ಕೊರೊನಾ ತಡೆಗೆ ದೇಶದಲ್ಲಿ ಲಸಿಕೆ ಅಭಿಯಾನ ದೊಡ್ಡಮಟ್ಟದಲ್ಲಿ ನಡೆಯುತ್ತಿದೆ. ಕೊರೊನಾ ಲಸಿಕೆ ಹಾಕಿದ ನಂತ್ರ ಜ್ವರ, ಮೈಕೈ ನೋವು ಅನೇಕರನ್ನು ಕಾಡ್ತಿದೆ. ಇದನ್ನು ತಡೆಗಟ್ಟುವುದು ಹೇಗೆ ಎಂಬ ಪ್ರಶ್ನೆ ಅನೇಕರಲ್ಲಿ ಮೂಡಿದೆ. ಇದಕ್ಕೆ ಡಾಕ್ಟರ್ ಉಮಾ ನಾಯ್ಡು ಉತ್ತರ ನೀಡಿದ್ದಾರೆ.

ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಆಹಾರ ಪ್ರಮುಖ ಪಾತ್ರವಹಿಸುತ್ತದೆ. ಲಸಿಕೆ ಹಾಕಿದ ನಂತ್ರ ಆಹಾರದ ಬಗ್ಗೆ ಹೆಚ್ಚಿನ ಗಮನ ನೀಡಬೇಕಾಗುತ್ತದೆ. ಆಹಾರದಲ್ಲಿ ಪಾಲಕ್, ಬ್ರೋಕೋಲಿಯಂತಹ ಹಸಿರು ತರಕಾರಿಯನ್ನು ಬಳಸಬೇಕು. ಇದ್ರಲ್ಲಿ ಆಂಟಿ ಆಕ್ಸಿಡೆಂಟ್ ಪ್ರಮಾಣ ಹೆಚ್ಚಿದ್ದು, ದೇಹದ ಉರಿಯೂತವನ್ನು ಕಡಿಮೆ ಮಾಡುತ್ತದೆ.

ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವುದು ಬಹಳ ಮುಖ್ಯ. ಹಾಗಾಗಿ ಸೂಪ್ ಸೇವನೆ ಮಾಡಬೇಕು.

ಈರುಳ್ಳಿ ಹಾಗೂ ಬೆಳ್ಳುಳ್ಳಿ ನಮ್ಮ ದೇಹಕ್ಕೆ ಬಹಳ ಮುಖ್ಯ. ಫೈಬರ್ ಮತ್ತು ಪ್ರೋಬಯಾಟಿಕ್ ಸಮೃದ್ಧವಾಗಿದ್ದು, ಇದು ಕರುಳಿನ ಆರೋಗ್ಯ ವೃದ್ಧಿಸುತ್ತದೆ.

ಅರಿಶಿನ ಉರಿಯೂತದ ವಿರುದ್ಧ ಹೋರಾಡಲು ಪರಿಣಾಮಕಾರಿಯಾಗಿದೆ. ಮೆದುಳನ್ನು ಒತ್ತಡದಿಂದ ರಕ್ಷಿಸುತ್ತದೆ. ಅರಿಶಿನ  ಖಿನ್ನತೆಯನ್ನು ಕಡಿಮೆ ಮಾಡುತ್ತದೆ. ಬ್ಲೂಬೆರ್ರಿ ಉರಿಯೂತವನ್ನು ಕಡಿಮೆ ಮಾಡುತ್ತದೆ. ಇದ್ರಲ್ಲಿ ಆಂಟಿ-ಆಕ್ಸಿಡೆಂಟ್ ಕಂಡು ಬರುತ್ತದೆ. ಇದು ರೋಗವನ್ನು ತಡೆಗಟ್ಟುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...