ಮನೆಯಲ್ಲಿ ಹಿರಿಯರಿದ್ದರೆ ಕೇಳಿ ನೋಡಿ, ಅವರು ಎಂದಾದರೂ ಮೊಸರಿಲ್ಲದೆ ಊಟ ಮುಗಿಸಿದ್ದಾರೆಯೇ ಎಂದು. ಮೊಸರಿನ ಮಹತ್ವವೇ ಅಂಥದ್ದು. ಆದರೆ ಇಂದಿನ ಜನಾಂಗ ಮೊಸರೆಂದರೆ ಮಾರು ದೂರ ಓಡಿ ಹೋಗುತ್ತಾರೆ. ಮೊಸರಿನ ಆರೋಗ್ಯದ ಪ್ರಯೋಜನಗಳನ್ನು ತಿಳಿಯೋಣ ಬನ್ನಿ.
ಮೊಸರಿನಲ್ಲಿ ಸಾಕಷ್ಟು ಪ್ರಮಾಣದ ಕ್ಯಾಲ್ಸಿಯಂ, ವಿಟಮಿನ್ ಡಿ, ಪ್ರೊಟೀನ್ ಮತ್ತು ಬ್ಯಾಕ್ಟೀರಿಯಾಗಳಿದ್ದು ಇವು ತಿಂದ ಆಹಾರದ ಪೋಷಕಾಂಶಗಳನ್ನು ದೇಹಕ್ಕೆ ಸೇರುವಂತೆ ಮಾಡುತ್ತವೆ. ಮಕ್ಕಳಿಗೆ ಲೂಸ್ ಮೋಷನ್ ಅಗುತ್ತಿದ್ದರೆ ಮೊಸರಿಗೆ ಇಸಬ್ಗೋಲ್ ಹಾಕಿ ಕದಡಿ ಕುಡಿಸಿದರೆ ನಿಯಂತ್ರಣಕ್ಕೆ ಬರುತ್ತದೆ.
ಮಸಾಲೆ ಸಾಂಬಾರ್ ಅಥವಾ ಬಿರಿಯಾನಿ ತಿಂದ ಬಳಿಕ ಮೊಸರನ್ನು ಕಡ್ಡಾಯವಾಗಿ ಸೇವಿಸಬೇಕು. ಇದರಿಂದ ಮಸಾಲೆ ಪದಾರ್ಥಗಳ ಉಷ್ಣತೆ ಕಡಿಮೆಯಾಗುತ್ತದೆ. ಸೆಪ್ಟಿಕ್ ಅಲ್ಸರ್ ಸಮಸ್ಯೆಯನ್ನು ಇದು ನಿವಾರಿಸುತ್ತದೆ. ಮೊಸರಿನಲ್ಲಿರುವ ಬ್ಯಾಕ್ಟೀರಿಯಾ ಕ್ರಿಮಿಗಳನ್ನು ಕೊಲ್ಲುತ್ತದೆ ಹಾಗು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಈಸ್ಟ್ ಇನ್ಫೆಕ್ಷನ್ ತೊಂದರೆ ಅನುಭವಿಸುತ್ತಿರುವ ಮಹಿಳೆಯರಿಗೆ ಇದು ಬಹು ಉಪಕಾರಿ.
ಮೊಸರು ಮೂಳೆಗಳನ್ನು ಗಟ್ಟಿಗೊಳಿಸುತ್ತದೆ. ಇದನ್ನು ನಿತ್ಯ ಆಹಾರದಲ್ಲಿ ಸೇವಿಸುವವರಿಗೆ ಕೀಲು ನೋವು, ಹಲ್ಲು ನೋವಿನ ಸಮಸ್ಯೆ ಬಾರದು. ಹೃದಯ ಸಂಬಂಧಿ ಕಾಯಿಲೆಗಳು ಕಡಿಮೆಯಾಗುತ್ತದೆ.