
ಬೊಜ್ಜು ಈಗ ಎಲ್ಲರನ್ನೂ ಕಾಡುವ ಸಾಮಾನ್ಯ ಸಮಸ್ಯೆಯಾಗಿದೆ. ದೊಡ್ಡ ಹೊಟ್ಟೆ ಕರಗಿಸಿಕೊಳ್ಳಲು ಜನರು ಏನೆಲ್ಲ ಕಸರತ್ತು ಮಾಡ್ತಾರೆ. ಕೆಲವರು ವ್ಯಾಯಾಮದ ಮೊರೆ ಹೋಗ್ತಾರೆ. ಮತ್ತೆ ಕೆಲವರು ಮಾತ್ರೆ ಸೇವನೆ ಮಾಡ್ತಾರೆ.
ಕ್ಯಾಲೋರಿ ಬರ್ನ್ ಮಾಡಿಕೊಳ್ಳಲು ಮಾಡುವ ಕಸರತ್ತು ಒಂದೆರಡಲ್ಲ. ಆರಂಭದಲ್ಲಿ ಮಾತ್ರೆ ಪರಿಣಾಮ ಬೀರಿದಂತೆ ಕಾಣುತ್ತದೆ. ಆದ್ರೆ ದಿನ ಕಳೆದಂತೆ ಅದರ ಅಡ್ಡ ಪರಿಣಾಮದ ಅರಿವು ನಮಗಾಗುತ್ತದೆ.
ಮನೆಯಲ್ಲಿಯೇ ಬೊಜ್ಜು ಕರಗಿಸಿಕೊಳ್ಳಲು ಸಾಕಷ್ಟು ಔಷಧಿಗಳಿವೆ. ರಾತ್ರಿ ಮಲಗುವ ಮುನ್ನ ನಾವು ಹೇಳಿದಂತೆ ಮಾಡಿದ್ರೆ ಕೆಲವೇ ದಿನಗಳಲ್ಲಿ ಮುಂದೆ ಬಂದ ಹೊಟ್ಟೆ ಕರಗುವುದರಲ್ಲಿ ಎರಡು ಮಾತಿಲ್ಲ.
ಬೊಜ್ಜು ಕರಗಿಸಲು ಮನೆಯಲ್ಲೇ ಇದೆ ಮದ್ದು….!
ಗ್ರೀನ್ ಟೀ : ನೀವು ತೂಕ ಇಳಿಸಿಕೊಳ್ಳಲು ದಿನವಿಡೀ ಗ್ರೀನ್ ಟೀ ಸೇವನೆ ಮಾಡಬಹುದು. ಅದು ಒಳ್ಳೆಯದೆ. ಆದ್ರೆ ರಾತ್ರಿ ಮಲಗುವ ಮುನ್ನ ಒಂದು ಲೋಟ ಗ್ರೀನ್ ಟೀ ಸೇವನೆ ಮಾಡಿ ಮಲಗುವುದು ಮತ್ತಷ್ಟು ಪರಿಣಾಮಕಾರಿ. ಹೀಗೆ ಮಾಡುವುದರಿಂದ ಚಯಾಪಚಯ ಸರಿಯಾಗಿ, ಕೊಬ್ಬು ಕರಗುತ್ತದೆ.
ನಿದ್ರೆ : ರಾತ್ರಿ ಸರಿಯಾಗಿ ನಿದ್ದೆ ಮಾಡದೆ ಹೋದಲ್ಲಿ ಬೊಜ್ಜು ಕಾಣಿಸಿಕೊಳ್ಳುತ್ತದೆ. ಹಾಗಾಗಿ ಸರಾಸರಿ 7-8 ತಾಸು ನಿದ್ದೆ ಮಾಡುವುದು ಅವಶ್ಯಕ. ನಮ್ಮ ನಿದ್ದೆ, ಹಾರ್ಮೋನ್ ಗಳ ಮೇಲೆ ಪ್ರಭಾವ ಬೀರುತ್ತದೆ. ಹಾಗಾಗಿ ದೇಹಕ್ಕೆ ಅವಶ್ಯವಿರುವಷ್ಟು ನಿದ್ದೆ ಮಾಡುವುದು ಒಳ್ಳೆಯದು ಎನ್ನುತ್ತಾರೆ ವಿಜ್ಞಾನಿಗಳು.
ಹಸಿ ಮೆಣಸು : ಹಸಿ ಮೆಣಸು ಬೊಜ್ಜು ಕರಗಿಸಲು ನೆರವಾಗುತ್ತಾ ಎಂದು ಪ್ರಶ್ನೆ ಮಾಡಬೇಡಿ. ಬೊಜ್ಜು ಕರಗಿಸಲು ಹಸಿ ಮೆಣಸು ದಿ ಬೆಸ್ಟ್ ಎಂಬುದು ಸಂಶೋಧನೆಯಿಂದ ಸಾಬೀತಾಗಿದೆ. ಅದರಲ್ಲಿರುವ ರಾಸಾಯನಿಕ, ಬೊಜ್ಜನ್ನು ಕಡಿಮೆ ಮಾಡಲು ನೆರವಾಗುತ್ತದೆ.