ಸಾಮಾನ್ಯವಾಗಿ ತೂಕ ಇಳಿಸಿಕೊಳ್ಳಲು ಜನರು ಹರಸಾಹಸಪಡ್ತಾರೆ. ಬಹುತೇಕರಿಗೆ ನಮ್ಮ ಅಡುಗೆ ಮನೆಯಲ್ಲೇ ಇದಕ್ಕೆ ಮದ್ದಿದೆ ಅನ್ನೋದೇ ಗೊತ್ತಿಲ್ಲ.
ಅಡುಗೆ ಮನೆಯಲ್ಲಿ ಜೀರಿಗೆ ಇದ್ದೇ ಇರುತ್ತೆ. ಅನೇಕ ಪದಾರ್ಥಗಳಿಗೆ ಜೀರಿಗೆ ಬಳಸ್ತಾರೆ. ಖಾಲಿ ಹೊಟ್ಟೆಯಲ್ಲಿ ಸತತ 10 ದಿನ ಜೀರಿಗೆ ತಿಂದ್ರೆ ಸಾಕಷ್ಟು ಲಾಭವಿದೆ.
ಜೀರಿಗೆ ನೀರನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿದ್ರೆ ಸುಲಭವಾಗಿ ತೂಕ ಇಳಿಯುತ್ತದೆ.
ಬೆಳಿಗ್ಗೆ 10 ಗ್ರಾಂ ಜೀರಿಗೆಯನ್ನು ನೀರಿನ ಜೊತೆ ಸೇವನೆ ಮಾಡಿದ್ರೆ ಚಯಾಪಚಯ ಕ್ರಿಯೆ ಸುಲಭವಾಗುತ್ತದೆ. ಮೆಟಬಾಲಿಸಮ್ ಪ್ರಮಾಣ ಹೆಚ್ಚಾದಂತೆ ಸುಲಭವಾಗಿ ತೂಕ ಇಳಿಯಲು ಶುರುವಾಗುತ್ತದೆ.
ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಜೀರಿಗೆ ಸೇವನೆ ಮಾಡುವುದ್ರಿಂದ ರಕ್ತದಲ್ಲಿರುವ ಸಕ್ಕರೆ ಪ್ರಮಾಣ ಹೆಚ್ಚಾಗದಂತೆ ತಡೆಯಬಹುದು.
ಒಂದು ಗ್ಲಾಸ್ ನೀರಿಗೆ ಒಂದು ಚಮಚ ಜೀರಿಗೆ ಹಾಕಿ ಕುದಿಸಿ, ಆ ನೀರನ್ನು ಕುಡಿಯುವುದ್ರಿಂದ ಚರ್ಮದ ಸಮಸ್ಯೆಗಳು ದೂರವಾಗುತ್ತವೆ.