ಮೇಲ್ನೋಟಕ್ಕೆ ಚಿಕ್ಕುವನ್ನೇ ಹೋಲುವ ಕಿವಿ ಹಣ್ಣಿನ ಉಪಯೋಗಗಳ ಬಗ್ಗೆ ತಿಳಿಯದವರಿಲ್ಲ. ಅದಕ್ಕಿಂತ ಹೆಚ್ಚಿನ ಲಾಭಗಳನ್ನು ಕಿವಿ ಹಣ್ಣಿನ ಸೇವನೆಯಿಂದ ಪಡೆಯಬಹುದು. ಇದರಲ್ಲಿ ವಿಟಮಿನ್ ಸಿ ಮತ್ತು ಪೊಟ್ಯಾಶಿಯಂ ಸಾಕಷ್ಟಿದ್ದು ನಿಮ್ಮ ಮುಖದ ಹೊಳಪನ್ನು ಹೆಚ್ಚಿಸಲು ನೆರವಾಗುತ್ತದೆ.
ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಇದನ್ನು ನಿಯಮಿತವಾಗಿ ಸೇವಿಸುವುದರಿಂದ ಶ್ವಾಸಕೋಶದ ಸಮಸ್ಯೆಯನ್ನು ದೂರ ಮಾಡಬಹುದು. ಪೊಟ್ಯಾಶಿಯಂ ಕಡಿಮೆಯಾದ ರೋಗಿಗಳಿಗೆ ಆಸ್ಪತ್ರೆಯಲ್ಲಿ ಇದೇ ಜ್ಯೂಸ್ ಕೊಡಲು ಹೇಳುವುದನ್ನು ನೀವು ಗಮನಿಸಿರಬಹುದು. ಇದರಲ್ಲಿ ಮಧುಮೇಹ ಸೇರಿದಂತೆ ಹಲವು ರೋಗಗಳನ್ನು ನಿಯಂತ್ರಣದಲ್ಲಿಡುವ ಗುಣವಿದೆ.
ಈ ಹಣ್ಣಿನ ಸೇವನೆಯಿಂದ ದೇಹದ ಆಯಾಸ ಮತ್ತು ಸುಸ್ತು ಕಡಿಮೆಯಾಗುತ್ತದೆ. ಮಾರಣಾಂತಿಕ ರೋಗಗಳ ವಿರುದ್ಧ ಹೋರಾಡಲು ನೆರವಾಗುತ್ತದೆ. ಹೊಟ್ಟೆಗೆ ಸಂಬಂಧಿಸಿದ ಅಜೀರ್ಣ ಅಲ್ಸರ್ ಮೊದಲಾದ ಸಮಸ್ಯೆಗಳನ್ನು ಇದು ಗುಣಪಡಿಸುತ್ತದೆ. ಜ್ವರ, ಶೀತ ಬರದಂತೆಯೂ ರಕ್ಷಿಸುತ್ತದೆ.