ದೊಡ್ಡಪತ್ರೆ ಎಲೆ ತಂಪಿನ ಗುಣ ಹೊಂದಿದೆ. ಜ್ವರ ಹಾಗೂ ವಾತ ರೋಗಗಳನ್ನು ಕಡಿಮೆ ಮಾಡುವುದರಲ್ಲಿ ಎತ್ತಿದ ಕೈ ಮತ್ತು ಪೌಷ್ಠಿಕ ಗುಣಗಳನ್ನು ಹೊಂದಿದೆ. ಹಾಗೇ ಹೊಟ್ಟೆ ಉಬ್ಬರ ಮತ್ತು ಹೊಟ್ಟೆಯ ಸಮಸ್ಯೆಗಳನ್ನು ನಿವಾರಣೆ ಮಾಡುವಲ್ಲಿ ಇದು ಸಹಕಾರಿ.
ಜೀರ್ಣಶಕ್ತಿ ಹೆಚ್ಚಿಸುವ ಈ ದೊಡ್ಡಪತ್ರೆ ಎಲೆಯ ತಂಬುಳಿ ಮಾಡುವ ವಿವರ ಇಲ್ಲಿದೆ.
ಬೇಕಾಗುವ ಸಾಮಾಗ್ರಿಗಳು
15-20 ದೊಡ್ಡಪತ್ರೆ ಎಲೆಗಳು
ಅರ್ಧ ಟೀ ಸ್ಪೂನ್ ಜೀರಿಗೆ
ಅರ್ಧ ಟೀ ಸ್ಪೂನ್ ಕಾಳು ಮೆಣಸು
ಅರ್ಧ ಕಪ್ ತೆಂಗಿನತುರಿ
1 ಕಪ್ ಮೊಸರು
1 ಅಥವಾ 2 ಒಣಮೆಣಸಿನಕಾಯಿ
2 ಟೀ ಸ್ಪೂನ್ ಅಡುಗೆ ಎಣ್ಣೆ
ಕಾಲು ಟೀ ಸ್ಪೂನ್ ಸಾಸಿವೆ
ರುಚಿಗೆ ತಕ್ಕಷ್ಟು ಉಪ್ಪು
ರುಚಿಯಾದ ಮಟನ್ ಗ್ರೀನ್ ಮಸಾಲ ಮಾಡುವ ವಿಧಾನ
ಮಾಡವ ವಿಧಾನ
ದೊಡ್ಡಪತ್ರೆ ಎಲೆಗಳನ್ನು ತೊಳೆದು, ನೀರಾರಿಸಿ, ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಿ ಇಡಬೇಕು. ಒಂದು ಬಾಣಲೆಯಲ್ಲಿ ಒಂದು ಚಮಚ ಎಣ್ಣೆ ಅಥವಾ ತುಪ್ಪ ಹಾಕಿ ಜೀರಿಗೆ ಮತ್ತು ಕಾಳುಮೆಣಸನ್ನು ಹುರಿದುಕೊಳ್ಳಬೇಕು. ಜೀರಿಗೆ ಸಿಡಿದ ಕೂಡಲೇ ಕತ್ತರಿಸಿದ ಸೊಪ್ಪು ಹಾಕಿ ಬಾಡಿಸಬೇಕು. ತದನಂತರ ಕೂಡಲೇ ತೆಂಗಿನತುರಿ ಹಾಕಿ ಸ್ವಲ್ಪ ಹೊತ್ತು ಹುರಿದುಕೊಳ್ಳಬೇಕು.
ನಂತರ ಹುರಿದ ಮಿಶ್ರಣವನ್ನು ಮಿಕ್ಸಿ ಜಾರಿಗೆ ಹಾಕಿ ನುಣ್ಣಗೆ ರುಬ್ಬಿಕೊಂಡು ಒಂದು ಪಾತ್ರೆಗೆ ಬೆರೆಸಿ. ಬಳಿಕ ಉಪ್ಪು, ಮೊಸರು ಮತ್ತು ಬೇಕಾದಷ್ಟು ನೀರು ಹಾಕಿ ಕಲಸಬೇಕು. ಕೊನೆಯಲ್ಲಿ ಎಣ್ಣೆ, ಒಣಮೆಣಸು ಮತ್ತು ಸಾಸಿವೆ ಒಗ್ಗರಣೆ ಹಾಕಿದರೆ ತಂಬುಳಿ ಅನ್ನದೊಂದಿಗೆ ಸವಿಯಲು ಸಿದ್ಧ.