ದೇಹಕ್ಕೆ ಸಾಕಷ್ಟು ಪೋಷಕಾಂಶ ಹಾಗೂ ಜೀವಸತ್ವದ ಅವಶ್ಯಕತೆ ಇರೋದ್ರಿಂದ ದಿನಕ್ಕೆ 5 ಬಾರಿ ಹಣ್ಣು ಹಾಗೂ ತರಕಾರಿಗಳನ್ನ ಸೇವಿಸುವುದು ಉತ್ತಮ.
70 ಪ್ರತಿಶತ ಕೋಕೊ ಅಂಶವನ್ನ ಹೊಂದಿರುವ ಸಣ್ಣ ಪ್ರಮಾಣದ ಡಾರ್ಕ್ ಚಾಕೋಲೇಟ್ ಸೇವನೆಯಿಂದ ಆತಂಕ ದೂರಾಗಲಿದೆ.
ರೋಗ ನಿರೋಧಕ ಶಕ್ತಿಯನ್ನ ಹೆಚ್ಚಿಸಲು ದಿನಕ್ಕೆ ಒಂದು ಬಾರಿ ಅರಿಶಿಣದ ಹಾಲನ್ನ ಸೇವಿಸಿ.
ಸ್ವಲ್ಪ ಸಮಯದ ಅಂತರದಲ್ಲಿ ಮೃದು ಆಹಾರವನ್ನ ಸೇವಿಸುತ್ತಲೇ ಇರಿ. ಈ ಆಹಾರಕ್ಕೆ ಆಮ್ಚೂರ್ನ್ನು ಹಾಕಿಕೊಂಡು ತಿನ್ನಿ.
ರಾಗಿ, ಓಟ್ಸ್ನಂತಹ ಆಹಾರ ಧಾನ್ಯಗಳನ್ನ ಸೇವಿಸಿ.
ಪ್ರೋಟಿನ್ ಅಂಶಗಳು ಅಗಾಧ ಪ್ರಮಾಣದಲ್ಲಿರುವ ಚಿಕನ್, ಮೀನು, ಮೊಟ್ಟೆ, ಪನ್ನೀರ್, ಸೋಯಾದಂತಹ ಆಹಾರವನ್ನ ಸೇವಿಸಿ.
ವಾಲ್ನಟ್, ಆಲ್ಮೊಂಡ್, ಆಲಿವ್ ಎಣ್ಣೆ ಹಾಗೂ ಮಸ್ಟರ್ಡ್ ಎಣ್ಣೆಯನ್ನ ಸೇವಿಸಿ.
https://twitter.com/mygovindia/status/1390347626994864134