alex Certify ಕೋವಿಡ್-19: ಈ ರೋಗ ಲಕ್ಷಣಗಳ ಬಗ್ಗೆ ನಿಮಗಿರಲಿ ಅರಿವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋವಿಡ್-19: ಈ ರೋಗ ಲಕ್ಷಣಗಳ ಬಗ್ಗೆ ನಿಮಗಿರಲಿ ಅರಿವು

ನಾವೆಲ್ ಕೊರೋನಾ ವೈರಸ್‌ ಸಾಂಕ್ರಮಿಕರ ಎರಡನೇ ಅಲೆ ಭಾರತವನ್ನು ಆವರಿಸುತ್ತಿದ್ದು, ದಿನೇ ದಿನೇ ಕೋವಿಡ್-19 ಪಾಸಿಟಿವ್‌ ಮಂದಿಯ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ. ದೇಶಾದ್ಯಂತ ಒಟ್ಟಾರೆ ಸೋಂಕಿತರ ಸಂಖ್ಯೆಯು 1,32,05,926 ತಲುಪಿದ್ದು ಕಳೆದ 24 ಗಂಟೆಗಳ ಅವಧಿಯಲ್ಲೇ 1,45,384 ಮಂದಿಗೆ ಕೋವಿಡ್-19 ಪಾಸಿಟಿವ್‌ ಕಂಡುಬಂದಿದೆ.

ಮೂರು ದಿನಗಳ ಹಿಂದೆಯಷ್ಟೇ 24 ಗಂಟೆಗಳ ಅವಧಿಯಲ್ಲಿ ಲಕ್ಷಕ್ಕೂ ಅಧಿಕ ಕೋವಿಡ್ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದವು. ಮುಂಚೆ ಇದ್ದ ಕೊರೋನಾ ವೈರಸ್‌ ವೈರಾಣುಗಿಂತ ಈಗ ಹಬ್ಬಿರುವ ವೈರಾಣು ಹೆಚ್ಚು ಅಪಾಯಕಾರಿ ಎಂದು ಹೇಳಲಾಗುತ್ತಿದ್ದು, ರೋಗಲಕ್ಷಣಗಳಾದ ಜ್ವರ ಹಾಗೂ ಶೀತಗಳು ಬರದೇ ಇದ್ದರೂ ಸಹ ವ್ಯಕ್ತಿಯ ದೇಹದಲ್ಲಿ ಈ ವೈರಾಣುಗಳು ಇರುತ್ತವೆ ಎನ್ನಲಾಗಿದೆ.

ಆದರೂ, ನಿಮ್ಮಲ್ಲಿ ನಾವೆಲ್ ಕೊರೋನಾ ವೈರಸ್ ಇದೆಯೇ ಎಂದು ಅರಿಯಲು ಈ ಕೆಳಕಂಡ ಅಸಹಜ ರೋಗಲಕ್ಷಣಗಳ ಬಗ್ಗೆ ಜಾಗರೂಕರಾಗಿರಿ.

‘ಇಂದು ನನ್ನ ಕೊನೆಯ ದಿನ’ವೆಂದು ಬೋರ್ಡ್ ಮೇಲೆ ಬರೆದು ಶಾಲಾ ಕೊಠಡಿಯಲ್ಲೇ ವಿದ್ಯಾರ್ಥಿ ಆತ್ಮಹತ್ಯೆ

ಅಸಹಜ ಕೆಮ್ಮು

ವಿಶ್ವ ಆರೋಗ್ಯ ಸಂಸ್ಥೆ ವರದಿಯಂತೆ, ಸತತ ಕೆಮ್ಮು ನಿಮ್ಮನ್ನು ಬಾಧಿಸುತ್ತಿದ್ದರೆ ನೀವು ಸ್ವಲ್ಪ ಎಚ್ಚರಿಕೆ ವಹಿಸಬೇಕು.

ಕಂಜಕ್ಟಿವಿಟೀಸ್

ಪಿಂಕ್ ಕಣ್ಣು ಅಥವಾ ಕಂಜಕ್ಟಿವಿಟೀಸ್ ಸಹ ದೇಹದಲ್ಲಿ ಕೊರೋನಾ ವೈರಸ್ ಇರಬಹುದಾದ ರೋಗಲಕ್ಷಣವಾಗಿದೆ. ಈ ರೋಗಲಕ್ಷಣವನ್ನು ವಿಶ್ವ ಆರೋಗ್ಯ ಸಂಸ್ಥೆ ಮಾತ್ರವಲ್ಲದೇ ಅಮೆರಿಕದ ರಾಷ್ಟ್ರೀಯ ವೈದ್ಯಕೀಯ ಗ್ರಂಥಾಲಯದ ಪಟ್ಟಿಯಲ್ಲೂ ಸೇರಿಸಲಾಗಿದೆ.

ರುಚಿ ಹಾಗೂ ವಾಸನೆ ಹಿಡಿಯಲು ಆಗದಿರುವುದು

ಕೋವಿಡ್ ಸೋಂಕಿನ ಅತ್ಯಂತ ಸಾಮಾನ್ಯ ರೋಗಲಕ್ಷಣಗಳಲ್ಲಿ ಒಂದಾದ ಈ ಪರಿಸ್ಥಿತಿಯಲ್ಲಿ ರೋಗಿಗೆ ವಾಸನೆ ಹಾಗೂ ರುಚಿ ಕಂಡುಹಿಡಿಯಲು ಆಗುವುದಿಲ್ಲ. ಜ್ವರ ಹಾಗೂ ಶೀತದ ರೋಗಲಕ್ಷಣ ಇಲ್ಲದ ಜನರಲ್ಲಿ ಕಂಡುಬರಬಹುದಾದ ಅತಿ ದೊಡ್ಡ ರೋಗಲಕ್ಷಣ ಇದು ಎಂದು ಅಧ್ಯಯನಗಳು ತಿಳಿಸಿವೆ. ಸಾರ್ಸ್ ಕೋವ್‌-2 ವೈರಾಣುಗಳು ಬಾಯಿ ಹಾಗೂ ಮೂಗಿನ ಮೇಲೆ ದಾಳಿ ಮಾಡುವ ಕಾರಣ ಹೀಗೆ ಆಗುತ್ತದೆ ಎಂದು ಮತ್ತೊಂದು ಅಧ್ಯಯನ ತಿಳಿಸಿದೆ.

ಉಸಿರಾಡಲು ಕಷ್ಟ

ಕೋವಿಡ್‌-19ನ ಮತ್ತೊಂದು ಲಕ್ಷಣವೆಂದರೆ ಉಸಿರಾಡಲು ಕಷ್ಟವಾಗುವುದು. ಕೋವಿಡ್‌ ವೈರಾಣುಗಳು ಶ್ವಾಸಕೋಶಗಳ ಮೇಲೆ ದಾಳಿ ಮಾಡುವ ಕಾರಣ ಉಸಿರಾಟದ ಸಮಸ್ಯೆಯೂ ಸಹ ಒಂದು ರೋಗಲಕ್ಷಣವಾಗಿದೆ ಎನ್ನಲಾಗುತ್ತದೆ.

ಜೀರ್ಣವ್ಯವಸ್ಥೆಯಲ್ಲಿ ಸಮಸ್ಯೆ

ನಿಮಗೆ ಜೀರ್ಣವಾಗುವುದು ಕಷ್ಟವಾಗುತ್ತಿದ್ದಲ್ಲಿ — ವಾಮಿಟಿಂಗ್, ಡಯಾರಿಯಾ ಅಥವಾ ಕಿಬ್ಬೊಟ್ಟೆ ನೋವುಗಳು ಕಂಡು ಬಂದಲ್ಲಿ, ಅವೂ ಸಹ ಕೋವಿಡ್-18 ರೋಗಲಕ್ಷಣಗಳಾಗಿವೆ ಎಂದೂ ಸಹ ಅಧ್ಯಯನಗಳು ತಿಳಿಸುತ್ತಿವೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...