ಕೊರೊನಾ ಸೋಂಕು ವೇಗವಾಗಿ ಹರಡುತ್ತಿದೆ. ಕೊರೊನಾ ನಿಯಂತ್ರಣಕ್ಕೆ ಸಾಕಷ್ಟು ಪ್ರಯತ್ನಗಳು ನಡೆಯುತ್ತಿವೆ. ಕೊರೊನಾ ಬರದಂತೆ ತಡೆಯಲು ರೋಗನಿರೋಧಕ ಶಕ್ತಿ ಮಹತ್ವದ ಪಾತ್ರ ವಹಿಸುತ್ತದೆ. ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಂಡಲ್ಲಿ ಕೊರೊನಾ ಬಂದ್ರೂ ಬೇಗ ಗುಣಮುಖರಾಗಬಹುದು. ಹಾಗಾಗಿ ಆರೋಗ್ಯಕರ ಆಹಾರ ಸೇವನೆ ಮಹತ್ವದ ಪಾತ್ರ ವಹಿಸುತ್ತದೆ.
ವಿಟಮಿನ್ ಸಿ, ವಿಟಮಿನ್ ಡಿ ಹಾಗೂ ಝಿಂಕ್ ಅಂಶ ಹೆಚ್ಚಿರುವ ಆಹಾರವನ್ನು ಸೇವನೆ ಮಾಡಬೇಕು. ಈ ಮೂರು ಅಂಶಗಳು ನಮ್ಮ ದೇಹದಲ್ಲಿ ಹೆಚ್ಚಿನ ಪ್ರಮಾಣದಲ್ಲಿದ್ದರೆ ಆತಂಕ ಕಡಿಮೆಯಿರುತ್ತದೆ.
ಬೆಳಿಗ್ಗೆ ಗ್ರೀನ್ ಟೀ ಸೇವನೆ ಮಾಡಬೇಕು. ಗ್ರೀ ಟೀನಲ್ಲಿ ಆಂಟಿ ಆಕ್ಸಿಡೆಂಟ್ ಜೊತೆ ಪಾಲಿಫೆನಾಲ್ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದು ವೈರಸ್ ಹೆಚ್ಚಾಗದಂತೆ ತಡೆಯುತ್ತದೆ. ಪ್ರತಿ ದಿನ 2 ಬಾರಿ ಗ್ರೀನ್ ಟೀ ಸೇವನೆ ಮಾಡಿ.
ಕಷಾಯ ಕೂಡ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಕಷಾಯ ಸೇವನೆ ಮಾಡುವುದ್ರಿಂದ ನೆಗಡಿ, ಕೆಮ್ಮು, ಜ್ವರ ಕಡಿಮೆಯಾಗುತ್ತದೆ. ಆದ್ರೆ ಬೇಸಿಗೆಯಲ್ಲಿ ಹೆಚ್ಚಿನ ಕಷಾಯ ಸೇವನೆ ಮಾಡುವುದು ಒಳ್ಳೆಯದಲ್ಲ. ವಾರದಲ್ಲಿ ಮೂರು ಬಾರಿ ಮಾತ್ರ ಸೇವನೆ ಮಾಡಬೇಕು. ಹೊಟ್ಟೆಯಲ್ಲಿ ಅಲ್ಸರ್, ಕಿಡ್ನಿ ಸಮಸ್ಯೆ ಹಾಗೂ ಪೈಲ್ಸ್ ಸಮಸ್ಯೆಯಿರುವವರು ಕಷಾಯ ಸೇವನೆ ಮಾಡಬಾರದು.
ಕೊರೊನಾದಿಂದಾಗಿ ವರ್ಕ್ ಫ್ರಂ ಹೋಮ್ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ನೀವು ಇವ್ರಲ್ಲಿ ಒಬ್ಬರಾಗಿದ್ದರೆ ಮನೆಯ ಹೊರ ಭಾಗದಲ್ಲಿ ಸ್ವಲ್ಪ ಸಮಯ ಕಳೆಯಿರಿ. ಬಿಸಿಲಿನಲ್ಲಿ ಸ್ವಲ್ಪ ಸಮಯ ನಿಮ್ಮ ದೇಹವನ್ನು ಒಡ್ಡಬೇಕು. ಹೀಗೆ ಮಾಡುವುದ್ರಿಂದ ವಿಟಮಿನ್ ಡಿ ಪ್ರಮಾಣ ದೇಹ ಸೇರುತ್ತದೆ. ಅದು ರೋಗದ ವಿರುದ್ಧ ಹೋರಾಡುವ ಶಕ್ತಿ ನೀಡುತ್ತದೆ. ಸಾಮಾನ್ಯವಾಗಿ ಬಿಸಿಲಿನಿಂದ ದೇಹಕ್ಕೆ ಶೇಕಡಾ 80ರಷ್ಟು ವಿಟಮಿನ್ ಡಿ ಸಿಗುತ್ತದೆ. ಆಹಾರದಿಂದ ಶೇಕಡಾ 20ರಷ್ಟು ಮಾತ್ರ ವಿಟಮಿನ್ ಡಿ ಸಿಗುತ್ತದೆ. ದೇಹದಲ್ಲಿ ವಿಟಮಿನ್ ಡಿ ಹೆಚ್ಚಿಸಲು ಹಣ್ಣು, ಬ್ರೊಕೊಲಿ, ಬಾದಾಮಿ, ಹಾಲು, ಮೊಟ್ಟೆ, ಮಶ್ರೂಮ್ ಸೇವನೆ ಮಾಡಬೇಕು.
ವಿಟಮಿನ್ ಸಿ ಕೂಡ ದೇಹಕ್ಕೆ ಅತ್ಯಗತ್ಯ. ವಿಟಮಿನ್ ಸಿ ಹೆಚ್ಚಿರುವ ನೆಲ್ಲಿಕಾಯಿ, ಕಿತ್ತಳೆ ಹಣ್ಣು, ಬಲಿತ ಮಾವಿನ ಹಣ್ಣು, ಪಾಲಕ್ ಸೊಪ್ಪಿನ ಸೇವನೆ ಮಾಡಬೇಕು. ಇದಲ್ಲದೆ 65-90 ಎಂಜಿಯ ಮಾತ್ರೆ ಸೇವನೆ ಮಾಡಿ. ಇದು ಎಂಟಿ ಆಕ್ಸಿಡೆಂಟ್ ರೂಪದಲ್ಲಿ ಕೆಲಸ ಮಾಡುತ್ತದೆ. ಬ್ಯಾಕ್ಟೀರಿಯಾ ಕೊಲ್ಲುವ ಕೆಲಸ ಮಾಡುತ್ತದೆ.
ಇದಲ್ಲದೆ ಝಿಂಕ್ ಅಂಶವಿರುವ ಆಹಾರ ಸೇವನೆ ಮಾಡಬೇಕು. ಅಗತ್ಯವಿರುವವರು ಝಿಂಕ್ ಮಾತ್ರೆ ಸೇವನೆ ಮಾಡಬೇಕು. 10 ಎಂಜಿ ಝಿಂಕ್ ಮಾತ್ರೆಯನ್ನು 3 ತಿಂಗಳು ಸೇವನೆ ಮಾಡಬೇಕು. ಇದಲ್ಲದೆ ವೈರಸ್ ಕೊಲ್ಲಲು ನಿದ್ರೆ ಮಹತ್ವದ್ದು. ನಿದ್ರೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತದೆ.