ಅನಗತ್ಯ ಗರ್ಭ ತಪ್ಪಿಸಲು ಸಾಮಾನ್ಯವಾಗಿ ಮಹಿಳೆಯರು ಗರ್ಭ ನಿರೋಧಕ ಮಾತ್ರೆಗಳ ಸೇವನೆ ಮಾಡ್ತಾರೆ. ಆದ್ರೆ ಈ ಗರ್ಭ ನಿರೋಧಕ ಮಾತ್ರೆಗಳು ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರುತ್ತವೆ. ಇತ್ತೀಚಿಗೆ ನಡೆದ ಸಂಶೋಧನೆಯೊಂದು ಗರ್ಭ ನಿರೋಧಕ ಮಾತ್ರೆಗಳ ಅಡ್ಡ ಪರಿಣಾಮದ ಬಗ್ಗೆ ದಂಗಾಗಿಸುವ ವರದಿ ನೀಡಿದೆ.
ಗರ್ಭ ನಿರೋಧಕ ಮಾತ್ರೆ ಸೇವನೆ ಮಾಡುವ ಮಹಿಳೆಯರು ನಿರ್ಣಯ ತೆಗೆದುಕೊಳ್ಳುವ ಸಾಮಾರ್ಥ್ಯ ಕಳೆದುಕೊಳ್ತಾರಂತೆ. ಇದು ಅವ್ರ ಸಂಬಂಧದ ಮೇಲೂ ಪರಿಣಾಮ ಬೀರುತ್ತದೆಯಂತೆ. ಸಂಶೋಧನೆ ಪ್ರಕಾರ ಮಹಿಳೆಯರ ಮೆದುಳಿನಲ್ಲಿ ಹಾರ್ಮೋನ್ ಬದಲಾವಣೆಯಾಗುತ್ತದೆಯಂತೆ. ಮಹಿಳೆಯರು ಬೇರೆಯವರ ಭಾವನೆ, ವ್ಯಕ್ತಿತ್ವವನ್ನು ಅರ್ಥ ಮಾಡಿಕೊಳ್ಳಲು ಅಸಮರ್ಥರಾಗುತ್ತಾರಂತೆ.
ಸಂಶೋಧಕರ ಪ್ರಕಾರ, ವಿಶ್ವದಾದ್ಯಂತ 100 ಮಿಲಿಯನ್ ಮಹಿಳೆಯರು ಗರ್ಭ ನಿರೋಧಕ ಮಾತ್ರೆ ಸೇವನೆ ಮಾಡ್ತಾರಂತೆ. ಇದ್ರಿಂದ ಅಡ್ಡ ಪರಿಣಾಮವಿದೆ ಎಂಬುದು ಅನೇಕ ಮಹಿಳೆಯರಿಗೆ ತಿಳಿದಿದೆಯಂತೆ. ಗರ್ಭ ನಿರೋಧಕ ಮಾತ್ರೆ ಸೇವನೆ ಮಾಡುವ ಮಹಿಳೆಯರು ಸಂಗಾತಿಗೆ ಲೈಂಗಿಕ ಸುಖವೊಂದೇ ಅಲ್ಲ ಭಾವನಾತ್ಮಕವಾಗಿಯೂ ಅವ್ರನ್ನು ಪ್ರೀತಿಸುವುದಿಲ್ಲವಂತೆ.