alex Certify ಫೆಬ್ರವರಿಯಲ್ಲಿ ಋತು ಬದಲಾಗ್ತಿದ್ದಂತೆ ಡಯಟ್ ನಲ್ಲಿರಲಿ ಈ ಆಹಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಫೆಬ್ರವರಿಯಲ್ಲಿ ಋತು ಬದಲಾಗ್ತಿದ್ದಂತೆ ಡಯಟ್ ನಲ್ಲಿರಲಿ ಈ ಆಹಾರ

ಹವಾಮಾನ ಬದಲಾಗ್ತಿದ್ದಂತೆ ಶೀತ, ಜ್ವರ, ಅಲರ್ಜಿಯಂತಹ ಸಮಸ್ಯೆಗಳು ಕಾಡಲು ಶುರು ಮಾಡುತ್ತವೆ. ಮಕ್ಕಳು, ವೃದ್ಧರು ಮಾತ್ರವಲ್ಲ ಆರೋಗ್ಯವಂತ ವಯಸ್ಕರು ಸಹ ಆರೋಗ್ಯದ ಬಗ್ಗೆ ಗಮನ ನೀಡಬೇಕಾಗುತ್ತದೆ.

ಫೆಬ್ರವರಿ ತಿಂಗಳಲ್ಲಿ ಋತು ಬದಲಾಗುತ್ತದೆ. ಹಗಲಿನಲ್ಲಿ ಬಿಸಿಲು ಹೆಚ್ಚಿರುತ್ತದೆ. ರಾತ್ರಿ ಶೀತ ಕಾಡುತ್ತದೆ. ಇದು ಅಲರ್ಜ, ಕೆಮ್ಮು, ಶೀತ ಸಮಸ್ಯೆಗೆ ಕಾರಣವಾಗುತ್ತದೆ. ಪದೇ ಪದೇ ಔಷಧಿ ಸೇವನೆ ಮಾಡುವ ಬದಲು ನಿಮ್ಮ ಆಹಾರದಲ್ಲಿ ಬದಲಾವಣೆ ಮಾಡಿಕೊಂಡು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು.

ವಿಟಮಿನ್ ಸಿ ಸಮೃದ್ಧವಾಗಿರುವ ಸಿಟ್ರಸ್ ಹಣ್ಣುಗಳನ್ನು ಸೇವನೆ ಮಾಡಿ. ವಿಟಮಿನ್ ಸಿ ಬದಲಾಗುವ ಋತುವಿನಲ್ಲಿ ರೋಗ ಹರಡುವ ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡಲು ದೇಹದ ಪ್ರತಿರಕ್ಷಣಾ ವ್ಯವಸ್ಥೆಗೆ ಸಹಾಯ ಮಾಡುತ್ತದೆ. ಕಿತ್ತಳೆ, ದ್ರಾಕ್ಷಿ, ಕಿವಿಸ್, ಪೇರಲ, ಸ್ಟ್ರಾಬೆರಿಗಳಂತಹ ವಿಟಮಿನ್ ಸಿ ಸಮೃದ್ಧವಾಗಿರುವ ಸಿಟ್ರಸ್ ಹಣ್ಣುಗಳ ಜೊತೆಗೆ ಕೆಂಪು-ಹಳದಿ-ಹಸಿರು ಕ್ಯಾಪ್ಸಿಕಂ ಮತ್ತು ಬ್ರೊಕೊಲಿಯಂತಹ ಆಹಾರವನ್ನು ಸೇವಿಸಿ.

ಬದಲಾಗುವ ಋತುವಿನಲ್ಲಿ ದಾಳಿಂಬೆ ಹಣ್ಣನ್ನು ಸೇವನೆ ಮಾಡಬೇಕು. ಸೂಕ್ಷ್ಮಜೀವಿಗಳಿಂದ ರಕ್ಷಿಸಲು ದೇಹಕ್ಕೆ ಸಹಾಯ ಮಾಡುತ್ತದೆ. ದಾಳಿಂಬೆ ರಸವು ವಿಟಮಿನ್ ಸಿ ಯ ಅತ್ಯುತ್ತಮ ಮೂಲವಾಗಿದೆ. ಆಂಟಿಆಕ್ಸಿಡೆಂಟ್‌ಗಳು ದಾಳಿಂಬೆಯಲ್ಲಿ ಸಹ ಕಂಡುಬರುತ್ತವೆ. ಇದು ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುವ ಮೂಲಕ ರೋಗದ ವಿರುದ್ಧ ಹೋರಾಡಲು ಶಕ್ತಿ ನೀಡುತ್ತದೆ.

ಒಣ ಹಣ್ಣುಗಳ ಸೇವನೆ ಕೂಡ ಒಳ್ಳೆಯದು. ಬಾದಾಮಿ, ವಾಲ್ನಟ್ಸ್, ಪಿಸ್ತಾ ಮುಂತಾದ ಒಣ ಹಣ್ಣುಗಳು ಪೋಷಕಾಂಶಗಳಿಂದ ಸಮೃದ್ಧವಾಗಿರುವ ಅತ್ಯುತ್ತಮ ಆಹಾರಗಳಲ್ಲಿ ಒಂದಾಗಿದೆ. ವಿಟಮಿನ್ ಇ ತುಂಬಿರುವು ಒಣ ಹಣ್ಣುಗಳನ್ನು ಈ ಋತುವಿನಲ್ಲಿ ಸೇವಿಸುವುದು ಅತ್ಯಗತ್ಯ. ಇವುಗಳನ್ನು ಲಘು ಆಹಾರವಾಗಿ ಸೇವನೆ ಮಾಡಬಹುದು.

ಅರಿಶಿನ, ದಾಲ್ಚಿನ್ನಿ, ಜೀರಿಗೆ, ಶುಂಠಿ-ಬೆಳ್ಳುಳ್ಳಿ ಇವುಗಳು ರೋಗಗಳನ್ನು ದೂರವಿರಿಸಲು ಸಹಾಯ ಮಾಡುತ್ತದೆ. ಅಡುಗೆ ಮನೆಯಲ್ಲಿ ಕಂಡು ಬರುವ ಈ ಸಾಮಾನ್ಯ ಮಸಾಲೆಗಳು ಆಂಟಿಆಕ್ಸಿಡೆಂಟ್‌ಗಳು ಮತ್ತು ಫೈಟೊನ್ಯೂಟ್ರಿಯಂಟ್‌ಗಳಿಂದ ತುಂಬಿದ್ದು, ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ.

ಬದಲಾದ ಋತುವಿನಲ್ಲಿ ಹಸಿರು ತರಕಾರಿಗಳನ್ನು ಸೇವಿಸಬೇಕು. ಪಾಲಕ್, ಸಾಸಿವೆ ಸೊಪ್ಪು, ಮೆಂತ್ಯ ಸೊಪ್ಪು ಮುಂತಾದ ಹಸಿರು ಎಲೆಗಳ ತರಕಾರಿಗಳನ್ನು ಸೇರಿಸಲು ಇದು ಸರಿಯಾದ ಸಮಯ. ಜೀವಸತ್ವಗಳು, ಖನಿಜಗಳು ಮತ್ತು ಫೈಬರ್ ಸಮೃದ್ಧವಾಗಿರುವ ಈ ತರಕಾರಿಗಳು ಆರೋಗ್ಯಕ್ಕೆ ಹಲವು ವಿಧಗಳಲ್ಲಿ ಪ್ರಯೋಜನಕಾರಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...