ಸಾಮಾನ್ಯವಾಗಿ ಎಲ್ಲಾ ಮಹಿಳೆಯರೂ ಮುಟ್ಟಿನ ನೋವಿನಿಂದ ಹೈರಾಣಾಗುತ್ತಾರೆ. ಪ್ರತಿ ತಿಂಗಳು ರುತುಸ್ರಾವದ ಮೂರು ದಿನಗಳ ಕಾಲ ಕಾಡುವ ನೋವನ್ನು ತಡೆಯಲಾಗದೆ ಒದ್ದಾಡುತ್ತಾರೆ. ಆ ಸಮಯದಲ್ಲಿ ಸಿಹಿ ತಿಂದರೆ ನೋವು ಕಡಿಮೆಯಾಗತ್ತೆ ಅನ್ನೋ ನಂಬಿಕೆ ಇದೆ.
ಆದ್ರೆ ಅದರಿಂದ ದುಷ್ಪರಿಣಾಮಗಳ ಅಪಾಯವೂ ಇದೆ. ನೋವು ಇನ್ನೂ ಜಾಸ್ತಿಯಾಗಬಹುದು, ಅಥವಾ ಮುಖದಲ್ಲಿ ಮೊಡವೆಗಳು ಏಳಬಹದು. ಅಮೆರಿಕದ ಬೇಕರಿಯೊಂದು ಮುಟ್ಟಿನ ನೋವಿಗೆ ಸಿಹಿಯಾದ ಪರಿಹಾರ ಕಂಡುಕೊಂಡಿದೆ.
ಮೂನ್ ಸೈಕಲ್ ಬೇಕರಿ ಡೆವೊನ್ ಲೊಫ್ಟ್ ನಲ್ಲಿ ಮುಟ್ಟಿನ ನೋವು ಕಡಿಮೆ ಮಾಡಲೆಂದೇ ವಿಶೇಷವಾದ ಕೇಕ್ ತಯಾರಿಸಲಾಗುತ್ತದೆ. ಈ ಬ್ರೌನೀಸ್ ಗಳಲ್ಲಿ ರಿಫೈನ್ಡ್ ಶುಗರ್ ಇರುವುದಿಲ್ಲ, ಬದಲಾಗಿ ಹೇರಳವಾದ ಪೋಷಕಾಂಶಗಳಿರುತ್ತದೆ.
ಇದು ನಿಮ್ಮ ನಾಲಿಗೆಗೂ ರುಚಿಕರವಾಗಿರುತ್ತದೆ, ಆರೋಗ್ಯಕ್ಕೂ ಒಳ್ಳೆಯದು. ಪ್ರತಿ ತಿಂಗಳು ರುತುಸ್ರಾವದ ಸಮಯದಲ್ಲಿ ಬ್ರೌನೀಸ್ ಸವಿಯುವ ಅವಕಾಶ ಮಹಿಳೆಯರಿಗೆ ಸಿಗುತ್ತಿದೆ. ಮಹಿಳೆಯರ ರುತುಸ್ರಾವಕ್ಕೂ ಆಹಾರಕ್ಕೂ ಯಾವ ರೀತಿಯ ಸಂಬಂಧವಿದೆ?
ಮುಟ್ಟಿನ ಸಂದರ್ಭದಲ್ಲಿ ಯಾವ್ಯಾಪ ಪೋಷಕಾಂಶಗಳು ಹಾಗೂ ಖನಿಜಾಂಶಗಳನ್ನು ಮಹಿಳೆಯರು ಸೇವಿಸಬಾರದು ಎಂಬುದನ್ನೆಲ್ಲ ಅಧ್ಯಯನ ಮಾಡಿ ಈ ಬ್ರೌನೀಸ್ ತಯಾರಿಸಲಾಗಿದೆ.
https://www.instagram.com/p/BYri0WZAY6G/