ಕ್ಯಾನ್ಸರ್ ಮಾರಕ ರೋಗಗಳಲ್ಲಿ ಒಂದು. ಇತ್ತೀಚಿನ ದಿನಗಳಲ್ಲಿ ಈ ಕ್ಯಾನ್ಸರ್ ಸಾಮಾನ್ಯ ರೋಗದಂತಾಗಿದೆ. ಸಣ್ಣ ಖಾಯಿಲೆ ಕಂಡು ಬಂದ್ರೂ ಕ್ಯಾನ್ಸರ್ ಪರೀಕ್ಷೆ ಮಾಡಿಸಿಕೊಳ್ಳುವುದು ಅನಿವಾರ್ಯವಾಗಿದೆ.
ಸಾಮಾನ್ಯವಾಗಿ ಸ್ತನ ಕ್ಯಾನ್ಸರ್ ಮಹಿಳೆಯರನ್ನು ಕಾಡುವ ಕ್ಯಾನ್ಸರ್ ಎಂದು ಅನೇಕರು ನಂಬಿದ್ದಾರೆ. ಆದ್ರೆ ಸ್ತನ ಕ್ಯಾನ್ಸರ್ ಮಹಿಳೆಯರಲ್ಲಿ ಮಾತ್ರವಲ್ಲ ಪುರುಷರಲ್ಲೂ ಕಾಣಿಸಿಕೊಳ್ಳುತ್ತದೆ.
ಪುರುಷರಿಗೆ ಸ್ತನ ಕ್ಯಾನ್ಸರ್ ಸಾಮಾನ್ಯವಾಗಿ 60 ವರ್ಷಕ್ಕಿಂತ ಹೆಚ್ಚಾದ್ಮೇಲೆ ಕಾಣಿಸಿಕೊಳ್ಳುತ್ತದೆ. ಪುರುಷರಲ್ಲಿ ಕಂಡುಬರುವ ಅಪರೂಪದ ಕಾಯಿಲೆಯಾಗಿದೆ. ವಾಸ್ತವವಾಗಿ ಸ್ತನ ಕ್ಯಾನ್ಸರ್ ಬಗ್ಗೆ ಪುರುಷರಿಗೆ ಮಾಹಿತಿ ಇಲ್ಲ. ಜನರು ಸಾಮಾನ್ಯವಾಗಿ ಅದರ ರೋಗಲಕ್ಷಣಗಳ ಬಗ್ಗೆ ಗಮನ ಹರಿಸದೇ ಇದ್ರೆ ರೋಗ ಗುಣಪಡಿಸುವುದು ಬಹಳ ಕಷ್ಟ.
ಎದೆಯ ಮೇಲೆ ಒಂದು ಉಬ್ಬಿದ ಗಡ್ಡೆ ರೂಪುಗೊಳ್ಳುತ್ತಿದ್ದರೆ ಅದನ್ನು ನಿರ್ಲಕ್ಷಿಸಬೇಡಿ. ಇದು ಸ್ತನ ಕ್ಯಾನ್ಸರ್‌ನ ಲಕ್ಷಣವಾಗಿರಬಹುದು. ಈ ಗಡ್ಡೆಗಳಲ್ಲಿ ಯಾವುದೇ ನೋವು ಕಾಣಿಸಿಕೊಳ್ಳದೆ ಇರಬಹುದು. ಆದ್ರೆ ಕ್ಯಾನ್ಸರ್ ಮುಂದುವರೆದಂತೆ ಅದು ಕುತ್ತಿಗೆಗೆ ಹರಡಿ ದುರ್ಮಾಂಸ ಬೆಳೆಯುವ ಸಾಧ್ಯತೆ ಇರುತ್ತೆ.
ಅಂಗಿಯ ಎದೆ ಭಾಗದ ಮೇಲೆ ಆಗಾಗ್ಗೆ ಕಲೆಗಳು ಕಂಡುಬಂದರೆ ಅದನ್ನ ನಿರ್ಲಕ್ಷಿಸಬೇಡಿ. ಅಂಗಿಯ ಮೇಲೆ ರಕ್ತದ ಕಲೆಗಳು ಕಾಣಿಸಿಕೊಳ್ಳಲು ಪ್ರಾರಂಭಿಸಿದ್ರೆ ಅದು ಕ್ಯಾನ್ಸರ್ ಲಕ್ಷಣ.