ಈಗ ಎಳೆಯರಿಂದ ಹಿಡಿದು ದೊಡ್ಡವರವರೆಗೂ ಕಾಡುವ ಸಮಸ್ಯೆ ಎಂದರೆ ಅದು ಬೆನ್ನು ನೋವು. ನಾವು ತಿನ್ನುವ ಆಹಾರ, ಅನುಸರಿಸುವ ಜೀವನ ಪದ್ಧತಿ ಹಾಗೂ ಕುಳಿತುಕೊಳ್ಳುವ ಭಂಗಿ ಕೂಡ ಈ ಬೆನ್ನು ನೋವಿನ ಸಮಸ್ಯೆಗೆ ಕಾರಣವಾಗುತ್ತದೆ. ಸುಲಭದಲ್ಲಿ ಇದನ್ನು ನಿವಾರಿಸಿಕೊಳ್ಳಲು ಹೀಗೆ ಮಾಡಿ.
- ನೀವು ಮಲಗುವ ಭಂಗಿ ಕೂಡ ನಿಮ್ಮ ಬೆನ್ನು ನೋವಿಗೆ ಪ್ರಮುಖ ಕಾರಣವಾಗುತ್ತದೆ. ಎಂಟು ಗಂಟೆಗಳ ಕಾಲ ಚೆನ್ನಾಗಿ ನಿದ್ರಿಸಿ. ಹಾಗೇ ನೀವು ಎಡ ಅಥವಾ ಬಲ ಮಗ್ಗಲಿಗೆ ತಿರುಗಿಕೊಂಡು ಮಲಗುವ ಅಭ್ಯಾಸವಿದ್ದರೆ ನಿಮ್ಮ ಮೊಣಕಾಲುಗಳ ಮಧ್ಯೆ ದಿಂಬನ್ನು ಇಟ್ಟುಕೊಂಡು ಮಲಗಿ. ಆಗ ನಿಮ್ಮ ಬೆನ್ನು ಮೂಳೆಗೆ ಆಧಾರ ಸಿಕ್ಕಿದ ಹಾಗೇ ಆಗುತ್ತದೆ. ನೇರವಾಗಿ ಮಲಗುವುದಾದರೆ ಮೊಣಕಾಲುಗಳ ಕೆಳಗೆ ದಿಂಬನ್ನು ಇಟ್ಟುಕೊಂಡು ಮಲಗಿ.
- ಇನ್ನು ಕಂಪ್ಯೂಟರ್ ಮುಂದೆ ಕೆಲಸ ಮಾಡುವಾಗ, ಎಲ್ಲಾದರೂ ಕುಳಿತುಕೊಳ್ಳುವಾಗ ಸಾಧ್ಯವಾದಷ್ಟು ನೇರವಾಗಿ ಕುಳಿತುಕೊಳ್ಳುವುದಕ್ಕೆ ಅಭ್ಯಾಸ ಮಾಡಿ. ಬಾಗಿ ಕುಳಿತುಕೊಳ್ಳುವುದರಿಂದ ಮತ್ತಷ್ಟು ನೋವು ಜಾಸ್ತಿಯಾಗುತ್ತದೆ.
- ಬೆನ್ನಿಗೆ ಸಂಬಂಧ ಪಟ್ಟ ವ್ಯಾಯಾಮಗಳನ್ನು ನಿಧಾನಕ್ಕೆ ಮಾಡಿ. ವಾಕಿಂಗ್ ಕೂಡ ಬೆನ್ನು ನೋವಿನ ನಿವಾರಣೆಗೆ ಸಹಾಯಕವಾಗುತ್ತದೆ.
- ಕ್ಯಾಲ್ಸಿಯಂ ಭರಿತವಾದ ಆಹಾರವನ್ನು ಹೆಚ್ಚೆಚ್ಚು ಸೇವಿಸಿ. ರಾತ್ರಿ ಊಟವಾದ ಬಳಿಕ ಬಿಸಿ ಹಾಲು ಕುಡಿಯುವುದನ್ನು ಮರೆಯದಿರಿ.