ಕೊರೊನಾ ಕಾಯಿಲೆಯಿಂದ ಚೇತರಿಸಿಕೊಳ್ಳುತ್ತಿರುವ 30ರಿಂದ 50 ವರ್ಷ ವಯಸ್ಸಿನವರಿಗೆ ಹೃದಯ ಸಮಸ್ಯೆಗಳು ಹೆಚ್ಚಾಗಿ ಕಾಡುತ್ತಿದೆ. ಉಸಿರಾಟ, ಎದೆ ನೋವು, ಹಠಾತ್ ಹೃದಯ ಬಡಿತದ ವೇಗ ಹೆಚ್ಚಳ ಅಥವಾ ಹೃದಯ ಬಡಿತ ನಿಧಾನವಾಗುವುದು, ಹೃದಯಾಘಾತ ಕಾಡುತ್ತದೆ. ಕೊರೊನಾದಿಂದ ಚೇತರಿಸಿಕೊಂಡ ನಂತರವೂ ದೀರ್ಘಕಾಲದವರೆಗೆ ರೋಗದ ಲಕ್ಷಣಗಳು ಇರುತ್ತವೆ.
ದೇಹದಲ್ಲಿ ಉರಿಯೂತ ಮತ್ತು ರಕ್ತ ಹೆಪ್ಪುಗಟ್ಟುವಿಕೆ ಸಮಸ್ಯೆ ಕಾಡುತ್ತದೆ. ಶ್ವಾಸಕೋಶದ ಸೋಂಕು ಮತ್ತು ನ್ಯುಮೋನಿಯಾದಿಂದಾಗಿ ಉಸಿರಾಟ ಮತ್ತು ಉಸಿರಾಟದ ತೊಂದರೆ ಕಾಡುತ್ತದೆ. ಕೆಮ್ಮು ಮತ್ತು ಉಸಿರಾಟದ ತೊಂದರೆ ಕೂಡ ಹೃದ್ರೋಗಕ್ಕೆ ಸಂಬಂಧಿಸಿದೆ. ಈ ಹಿಂದೆ ಆರೋಗ್ಯವಾಗಿದ್ದ ರೋಗಿಗಳು ಕೋವಿಡ್ ನಂತರ ಹೃದಯ ಸಮಸ್ಯೆಗಳಿಗೆ ಸಂಬಂಧಿಸಿದ ಹೆಚ್ಚಿನ ಸಮಸ್ಯೆಗಳನ್ನು ಹೊಂದಿದ್ದರು ಎಂದು ವೈದ್ಯರು ಹೇಳಿದ್ದಾರೆ.
ತಲೆತಿರುಗುವಿಕೆ, ತಲೆನೋವು, ಹೆದರಿಕೆ, ಅಧಿಕ ರಕ್ತದೊತ್ತಡ, ವಾಂತಿ, ಬೆವರುವುದು, ಉಸಿರಾಟದ ತೊಂದರೆ, ಎದೆ ನೋವು ಕಾಣಿಸಿಕೊಂಡಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸಿ. ಆರಂಭದಲ್ಲಿ ರೋಗವನ್ನು ಪತ್ತೆಹಚ್ಚಿದರೆ, ಚಿಕಿತ್ಸೆ ಸಮಯಕ್ಕೆ ಸರಿಯಾಗಿ ಸಿಕ್ಕಲ್ಲಿ ಮುಂದಿನ ಜೀವನ ಆರಾಮದಾಯಕವಾಗಿರುತ್ತದೆ ಎಂದು ವೈದ್ಯರು ಹೇಳದ್ದಾರೆ. ಆರೋಗ್ಯಕರ ಹೃದಯಕ್ಕಾಗಿ ಫೈಬರ್ ಮತ್ತು ಪ್ರೋಟೀನ್ ಸಮೃದ್ಧವಾಗಿರುವ ವಸ್ತುಗಳನ್ನು ಸೇವಿಸಿ. ಎಣ್ಣೆ ಪದಾರ್ಥ, ಮಸಾಲೆ ಪದಾರ್ಥ, ಸಂಸ್ಕರಿಸಿದ ಮತ್ತು ಜಂಕ್ ಫುಡ್‌ನಿಂದ ದೂರವಿರಿ. ವ್ಯಾಯಾಮ ಮಾಡಿ. ತೂಕ ಹೆಚ್ಚಿಸಿಕೊಳ್ಳಬೇಡಿ. ಮದ್ಯ ಮತ್ತು ಧೂಮಪಾನದಿಂದ ದೂರವಿರಿ ಎಂದು ವೈದ್ಯರು ಹೇಳಿದ್ದಾರೆ.