ಲಾಕ್ ಡೌನ್ ಕಾರಣಕ್ಕೆ ಮನೆಯೇ ಕಚೇರಿಯಾಗಿದೆ. ಈ ಸಮಯದಲ್ಲಿ ನಿಮ್ಮ ಹೃದಯದ ಆರೋಗ್ಯ ಕಾಪಾಡಿಕೊಳ್ಳುವುದು ಕಠಿಣ ಕೆಲಸವಾಗಿದೆ. ಕೊರೊನಾ, ದೇಹದಲ್ಲಿ ಕೊಬ್ಬಿನಂಶ ಅಧಿಕವಾಗಿರುವವರಿಗೆ ಸುಲಭದಲ್ಲಿ ದಾಳಿ ನಡೆಸುತ್ತದೆ. ರೋಗ ಪೀಡಿತ ಹೃದಯ ಹೊಂದಿರುವವರು ಕೊರೊನಾದಿಂದ ಬಚಾವಾಗಲು ಹೆಚ್ಚು ಕಷ್ಟಪಡಬೇಕಾದೀತು. ಹಾಗಾಗಿ ಆರೋಗ್ಯಕರ ಊಟ ಸೇವಿಸುವುದು ಬಹಳ ಮುಖ್ಯ.
ಮನೆಯಲ್ಲೇ ಇರುವುದರಿಂದ ಹೆಚ್ಚು ಹೆಚ್ಚು ಹೊಸ ತಿಂಡಿಗಳನ್ನು ತಯಾರಿಸುವುದು ತಪ್ಪಲ್ಲ. ಅವು ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಎಂಬುದನ್ನು ಮೊದಲೇ ಆಲೋಚಿಸಿ. ಕೇವಲ ಜಂಕ್ ಫುಡ್ ತಯಾರಿಸುವ ಬದಲು ಆರೋಗ್ಯಯುಕ್ತ ಆಹಾರ ತಯಾರಿಸಿ. ಸಕ್ಕರೆಯಿಂದ ದೂರವಿರಿ. ಬೆಳ್ಳುಳ್ಳಿ, ಅರಿಶಿನ ಅಡುಗೆಯಲ್ಲಿ ಬಳಸಿಕೊಳ್ಳಿ. ಮಸಾಲೆಯುಕ್ತ ಹಾಗೂ ಎಣ್ಣೆಯಲ್ಲಿ ಕರಿದ ತಿಂಡಿಗಳನ್ನು ತಿನ್ನದಿರಿ.
ಮನೆಯಿಂದ ಹೊರಹೋಗಲು ಅವಕಾಶ ಇಲ್ಲದಿದ್ದರೆ ಮನೆಯಲ್ಲೇ ವ್ಯಾಯಾಮ ಮಾಡಿ. ಯೋಗಾಸನ ಅಥವಾ ಇತರ ವ್ಯಾಯಾಮಗಳ ಬಗ್ಗೆ ಯೂಟ್ಯೂಬ್ ನಲ್ಲಿ ತಡಕಾಡಿ. ಸೂಕ್ತವಾದುದನ್ನು ಆರಿಸಿ ಅನುಕರಿಸಿ.
ಈಗಾಗಲೇ ಹೃದಯ ಸಂಬಂಧಿ ಸಮಸ್ಯೆಗಳಿದ್ದರೆ ಮನೆಯಲ್ಲೇ ತಪಾಸಣೆ ನಡೆಸಿ. ಸಕ್ಕರೆ ಮತ್ತು ರಕ್ತದೊತ್ತಡವನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡಿ. ಆರೋಗ್ಯವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಿ. ಹೆಚ್ಚು ಹೊತ್ತು ಒಂದೆಡೆ ಕೂರದೆ ನಡೆಯುತ್ತಿರಿ. ಸಾಧ್ಯವಾದಷ್ಟು ಮನೆಕೆಲಸ ಮಾಡಿ ಸಕ್ರಿಯವಾಗಿರಿ.