ದೇಹ ತೂಕ ಇಳಿಸಲು ಹಲವರು ಹಲವು ವಿಧದ ಪ್ರಯೋಗಗಳನ್ನು ಮಾಡುತ್ತಲೇ ಇರುತ್ತಾರೆ. ಮನೆಯಲ್ಲೇ ಇರುವ ಕೆಲವು ಪದಾರ್ಥಗಳನ್ನು ಹೀಗೆ ಬಳಸುವ ಮೂಲಕ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಬಹುದು.
ಮೆಂತ್ಯ ಪೋಷಕಾಂಶಗಳು ಹೊಂದಿರುವುದು ಮಾತ್ರವಲ್ಲ, ದೇಹ ತೂಕ ಇಳಿಸಲೂ ಇದು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಹಿಂದಿನ ರಾತ್ರಿ ಮೆಂತ್ಯ ಕಾಳುಗಳನ್ನು ನೀರಿನಲ್ಲಿ ನೆನೆಸಿಡಿ. ಮರುದಿನ ಬೆಳಗ್ಗೆ ಇದರ ನೀರನ್ನು ಕುಡಿಯಿರಿ. ಇದರಿಂದ ದೇಹ ತೂಕ ಬಹುಬೇಗ ಕಡಿಮೆಯಾಗುತ್ತದೆ.
ಈ ಜ್ಯೂಸ್ ಉಪಯೋಗಿಸಿ ಹೆಚ್ಚುತ್ತಿರುವ ತೂಕಕ್ಕೆ ಹೇಳಿ ‘ಗುಡ್ ಬೈ’
ಮಧುಮೇಹ ಸಮಸ್ಯೆ ಇರುವವರಿಗೆ ಕಿವಿ ಹಣ್ಣಿನ ಸೇವನೆ ಅತ್ಯುತ್ತಮ ಎಂದು ಹೇಳಲಾಗುತ್ತದೆ. ಇದು ಸಕ್ಕರೆ ಅಂಶವನ್ನು ಹೆಚ್ಚಿಸದೆ ದೇಹದ ತೂಕವನ್ನು ಕಡಿಮೆ ಮಾಡುತ್ತದೆ.
ನಿಂಬೆಯಂತೆ ಕಿತ್ತಳೆಯೂ ಪೊಟ್ಯಾಸಿಯಂ ಮತ್ತು ವಿಟಮಿನ್ ಗಳನ್ನು ಒಳಗೊಂಡಿದೆ. ಇದು ತೂಕವನ್ನು ಇಳಿಸುತ್ತದೆ. ನಿತ್ಯ ಕಿತ್ತಳೆ ಸೇವಿಸಿ ಇಲ್ಲವೇ ಕಿತ್ತಳೆ ಹಣ್ಣಿನ ರಸ ಕುಡಿಯಿರಿ. ಸೀಬೇ ಹಣ್ಣನ್ನು ನಿತ್ಯ ತಿನ್ನುವುದರಿಂದ ತೂಕ ಕಳೆದುಕೊಳ್ಳುವುದು ಮಾತ್ರವಲ್ಲ, ಆಕರ್ಷಕ ತ್ವಚೆಯನ್ನೂ ನಿಮ್ಮದಾಗಿಸಿಕೊಳ್ಳಬಹುದು.