
ಹಿಮೋಗ್ಲೋಬಿನ್ ಕಡಿಮೆ ಇದೆ ಎಂದು ವೈದ್ಯರು ಹೇಳಿದ್ದಾರಾ…? ಹಾಗಿದ್ದರೆ ಈ ಕೆಲವು ವಸ್ತುಗಳನ್ನು ನಿಮ್ಮ ಆಹಾರದಲ್ಲಿ ಸೇವಿಸಿ ಹಾಗೂ ಯಾವುದೇ ಮಾತ್ರೆಗಳ ಸೇವನೆ ಇಲ್ಲದೆ ಹಿಮೋಗ್ಲೋಬಿನ್ ಪ್ರಮಾಣವನ್ನು ಏರಿಸಿ.
ಹಸಿರು ಸೊಪ್ಪು, ತರಕಾರಿಗಳನ್ನು ನಿತ್ಯದ ಆಹಾರದಲ್ಲಿ ಸೇವಿಸಿ. ದಿನಕ್ಕೊಂದು ಬಗೆಯ ಸೊಪ್ಪಿನ ಪಲ್ಯ ತಯಾರಿಸಿ ಸೇವಿಸಿ. ಕಬ್ಬಿಣದ ಆಂಶ ಹೆಚ್ಚಿದರೆ ಹಿಮೋಗ್ಲೋಬಿನ್ ಪ್ರಮಾಣ ಸಹಜವಾಗಿಯೇ ಏರುತ್ತದೆ.
ತರಕಾರಿಗಳಲ್ಲಿ ಮುಖ್ಯವಾಗಿ ಬೀಟ್ ರೂಟ್, ಟೊಮೆಟೊ ಸೇವಿಸಿ. ಹಣ್ಣುಗಳಲ್ಲಿ ಕಿವಿ, ದ್ರಾಕ್ಷಿ, ಕಿತ್ತಳೆ ಹಾಗೂ ಚಿಕ್ಕು ಹಣ್ಣುಗಳು ಹಿಮೋಗ್ಲೋಬಿನ್ ಪ್ರಮಾಣವನ್ನು ಹೆಚ್ಚಿಸುತ್ತವೆ.
ಚರ್ಮದ ಸೌಂದರ್ಯ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ
ಒಣಹಣ್ಣುಗಳನ್ನು ಸೇವಿಸಿ. ಅದರಲ್ಲೂ ಮುಖ್ಯವಾಗಿ ದ್ರಾಕ್ಷಿಯನ್ನು ಹಿಂದಿನ ರಾತ್ರಿ ನೀರಿನಲ್ಲಿ ನೆನೆಸಿ ಅಥವಾ ನೇರವಾಗಿ ತಿನ್ನಿ. ಕಷಾಯ, ಹಾಲು, ಚಹಾ ಕುಡಿಯುವ ವೇಳೆ ಸಕ್ಕರೆ ಬದಲು ಬೆಲ್ಲ ಬೆರೆಸಿ ಕುಡಿಯಿರಿ.
ಹಸಿರು ಧಾನ್ಯಗಳನ್ನೂ ಸೇವಿಸಿ. ಬಟಾಣಿ ಕಾಳು, ಜೋಳ. ಕಡಲೆ ಬೀಜಗಳನ್ನು ನಿಯಮಿತವಾಗಿ ಸೇವಿಸುತ್ತಿದ್ದರೆ ಹಿಮೋಗ್ಲೋಬಿನ್ ಸಮಸ್ಯೆ ಕಾಡದು.