ಮಹಿಳೆಯರು ಗರ್ಭಾವಸ್ಥೆಯಲ್ಲಿ ಮಾತ್ರವಲ್ಲ ಹೆರಿಗೆಯ ಬಳಿಕವೂ ತಾವು ಸೇವಿಸುವ ಆಹಾರದ ಕಡೆಗೆ ಗಮನ ಕೊಡಬೇಕು. ಇಲ್ಲವಾದರೆ ಮಗುವಿಗೆ ಹಾನಿಯಾಗುತ್ತದೆ. ಹಾಗಾಗಿ ಹೆರಿಗೆಯ ಬಳಿಕ ಮಗುವಿಗೆ ಹಾಲುಣಿಸುವ ತಾಯಂದಿರು ಈ ಆಹಾರಗಳನ್ನು ಹೆಚ್ಚಾಗಿ ಸೇವಿಸಬೇಡಿ.
*ಬೆಳ್ಳುಳ್ಳಿ : ಬೆಳ್ಳುಳ್ಳಿ ಸುವಾಸನೆಯನ್ನು ಹೊಂದಿರುವ ಆಹಾರ. ಇದನ್ನು ಸೇವಿಸಿದರೆ ಎದೆಹಾಲಿನ ರುಚಿ ಬದಲಾಗುತ್ತದೆ.
*ಕಾಫಿ : ಇದನ್ನು ಹೆಚ್ಚಾಗಿ ಸೇವಿಸಿದರೆ ಮಗುವನ್ನು ಕೆರಳಿಸಬಹುದು. ಮಗುವಿನ ನಿದ್ರೆಗೆ ಅಡ್ಡಿಯಾಗಬಹುದು. ಹಾಗಾಗಿ ಮಿತವಾಗಿ ಸೇವಿಸಿ.
*ಆಲ್ಕೋಹಾಲ್ : ಆಲ್ಕೋಹಾಲ್ ಸೇವಿಸಿದರೆ ಎದೆಹಾಲು ಹೆಚ್ಚಾಗುತ್ತದೆ ಎಂದು ಹೇಳುತ್ತಾರೆ. ಆದರೆ ಇದು ಸುಳ್ಳು, ಅಧ್ಯಯನಗಳ ಪ್ರಕಾರ ಇದು ಎದೆಹಾಲಿನ ಉತ್ಪಾದನೆಯನ್ನು ಕಡಿಮೆ ಮಾಡುತ್ತದೆ. ಅಲ್ಲದೇ ಇದು ಮಗುವಿಗೆ ಹಾನಿಯನ್ನುಂಟು ಮಾಡುತ್ತದೆ.
*ಕಡಲೆಕಾಯಿ : ಕಡಲೆಕಾಯಿ ಸೇವಿಸಿದರೆ ಮಗುವಿಗೆ ಅಜೀರ್ಣ ಸಮಸ್ಯೆ ಕಾಡುತ್ತದೆ. ಕೆಲವೊಮ್ಮೆ ಮಗುವಿಗೆ ಇದರಿಂದ ಅಲರ್ಜಿಯಾಗಿ ದದ್ದು, ವಾಂತಿ, ಅತಿಸಾರ ಸಮಸ್ಯೆ ಕಾಡಬಹುದು.
*ಎಣ್ಣೆಯುಕ್ತ ಆಹಾರಗಳನ್ನು ಸೇವಿಸಿದರೆ ಅದರಿಂದ ತೂಕ ಹೆಚ್ಚಾಗುತ್ತದೆ. ಗ್ಯಾಸ್ಟ್ರಿಕ್ ಸಮಸ್ಯೆ ಕಾಡುತ್ತದೆ. ಮಗುವಿನ ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ.