ಹಲ್ಲು ನೋವು ಪರಿಹಾರಕ್ಕೆ ಹತ್ತು ಹಲವು ಔಷಧಗಳನ್ನು ಪ್ರಯತ್ನಿಸಿ ಸೋತು ಎಲ್ಲವನ್ನೂ ಕೈಬಿಟ್ಟಿದ್ದೀರಾ? ಹಾಗಿದ್ದರೆ ಈ ಮನೆಮದ್ದುಗಳನ್ನು ಪ್ರಯತ್ನಿಸಿ ನೋಡಿ.
ಹಲ್ಲು ನೋವು ಆರಂಭವಾಗುತ್ತಲೇ ಉಪ್ಪು ನೀರಿನಿಂದ ಬಾಯಿ ಮುಕ್ಕಳಿಸಿ. ಇದರಿಂದ ಬಾಯಿಯಲ್ಲಿ ಉಳಿದ ತ್ಯಾಜ್ಯಗಳು ಅಥವಾ ಬ್ಯಾಕ್ಟೀರಿಯಾಗಳು ದೂರವಾಗುತ್ತದೆ. ಆರಂಭದ ಹಂತದಲ್ಲೇ ಹೀಗೆ ಮಾಡುವುದರಿಂದ ಹಲ್ಲುನೋವು ಕಡಿಮೆಯಾಗುತ್ತದೆ.
ಹರಿವೆ ಸೊಪ್ಪು ಸೇವಿಸುವುದರಿಂದ ಏನಾಗುತ್ತದೆ ಗೊತ್ತಾ…..?
ಬೆಳ್ಳುಳ್ಳಿಯನ್ನು ಜಜ್ಜಿ ನೋವಿರುವ ಹಲ್ಲಿನ ಜಾಗದಲ್ಲಿ ಇಟ್ಟುಕೊಳ್ಳುವುದರಿಂದ ಕೆಲವೇ ಗಂಟೆಗಳಲ್ಲಿ ಹಲ್ಲು ನೋವು ಕಡಿಮೆಯಾಗುತ್ತದೆ. ಲವಂಗವನ್ನೂ ಇದೇ ರೀತಿ ಪ್ರಯತ್ನಿಸಬಹುದು.
ಬಳಸಿ ತೆಗೆದ ಪುದೀನಾ ಚೀಲಗಳನ್ನು ನೋವಿರುವ ಹಲ್ಲಿನ ಜಾಗದಲ್ಲಿ ಇಟ್ಟುಕೊಳ್ಳಿ. ಐದರಿಂದ ಹತ್ತು ನಿಮಿಷ ಅಲ್ಲೇ ಇರಲು ಬಿಡಿ. ಇದು ಸ್ವಲ್ಪ ಬೆಚ್ಚಗಿದ್ದರೆ ಒಳ್ಳೆಯದು. ನಿಧಾನವಾಗಿ ಇದು ನೋವನ್ನು ಹೀರಿಕೊಳ್ಳುತ್ತದೆ.